ಸಾಧನ ಆಶ್ರೀತ್ ವರಿಗೆ ಶೇರೋ ಇಂಡಿಯನ್ ಲೇಜೆಂಡರಿ ಅವಾರ್ಡ್ 2024

Spread the love

ಸಾಧನ ಆಶ್ರೀತ್ ವರಿಗೆ ಶೇರೋ ಇಂಡಿಯನ್ ಲೇಜೆಂಡರಿ ಅವಾರ್ಡ್ 2024

ಕಾರ್ಕಳ: ಕಾರ್ಕಳ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ, ಖ್ಯಾತ ವಸ್ತ್ರ ವಿನ್ಯಾಸಕಿ, ಸಾಧನ ಆಶ್ರೀತ್ ವರಿಗೆ ಸುಧಾ ವೆಂಚರ್ಸ್ ಬೆಂಗಳೂರು ಹಾಗೂ ಎಸ್ ವಿ ಫಿದಾ ಇಂಡಿಯನ್ ಲೇಜೆಂಡರಿ ಆಶ್ರಯದಲ್ಲಿ ಫ್ಯಾಷನ್ ಶಿಕ್ಷಣ ಸಂಸ್ಥೆ ಮೂಲಕ ವಿಕಲಾಂಗ ವಿದ್ಯಾರ್ಥಿನಿಯರಿಗೆ ಮೌಲ್ಯಾಧಾರಿತ ಶಿಕ್ಷಣ, ಸ್ವಉದ್ಯೋಗಕ್ಕೆ ಪ್ರೋತ್ಸಾಹ, ಸಾಲ ಸೌಲಭ್ಯಕ್ಕೆ ಸಹಾಯ, ಉದ್ಯೋಗ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಹಾಗೂ ಸಮಾಜಸೇವೆಗೆ ಶೇರೋ ಇಂಡಿಯನ್ ಲೇಜೆಂಡರಿ ಅವಾರ್ಡ್ 2024 ಲಭಿಸಿದೆ.

ಕೇವಲ 5 ವರ್ಷಗಳಲ್ಲಿ ಕಾರ್ಕಳ,ಹಗರಿಬೊಮ್ಮನಹಳ್ಳಿ, ಬೆಂಗಳೂರು, ಹಾಗೂ ಮಂತ್ರಾಲಯದಲ್ಲಿ ಫ್ಯಾಷನ್ ಕಾಲೇಜನ್ನ ಆರಂಬಿಸಿ ಸ್ವತಃ ಸ್ವಾಭಿಮಾನಿಯಾಗಿ ಮಹಿಳೆಯರು ಸ್ವಾಭಿಮಾನಿಯಾಗಿ ಬದುಕಬೇಕು ಅನ್ನೋ ನೆಲೆಯಲ್ಲಿ ಉಚಿತ ಟೈಲರಿಂಗ್, ಉಚಿತ ಫ್ಯಾಶನ್ ತರಬೇತಿ – ಬ್ಯಾಗ್ ತಯಾರಿಕೆ, ಗಾರ್ಮೆಂಟ್ ಫ್ಯಾಬ್ರಿಕ್ ಪೈಂಟಿಂಗ್, ಜುವೆಲ್ಲರಿ ಮೇಕಿಂಗ್ ತರಬೇತಿ ನೀಡುತ್ತ ಬಂದಿದ್ದು ಮಾತು ಬಾರದ, ಕಿವಿ ಕೇಳಿಸದ ಕಿವುಡ ಮೂಗ ವಿದ್ಯಾರ್ಥಿನಿಯರಿಗೆ, ಕಡು ಬಡ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ, ಸ್ವಉದ್ಯೋಗಕ್ಕೆ ಪ್ರೋತ್ಸಾಹ, ಸಾಲ ಸೌಲಭ್ಯಕ್ಕೆ ಸಹಾಯ, ಶಿಕ್ಷಣ ಮುಗಿದ ಕೂಡಲೇ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಿ ಮಾನವೀಯತೆ ಹಾಗೂ ಸಮಾಜಸೇವೆ ಮೆರೆದಿದ್ದಾರೆ

ಬೆಂಗಳೂರಿನ ಹೋಟೆಲ್ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ ಧರಣಿ ದೇವಿ ಮಾಲಗತ್ತಿ ಪ್ರಶಸ್ತಿ ನೀಡಿ ಗೌರವಿಸಿದರು

ಈ ಸಂದರ್ಭದಲ್ಲಿ ನಿವೃತ್ತ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಡಾ ಎನ್ ಸಂತೋಷ್ ಹೆಗ್ಡೆ , ಖ್ಯಾತ ಅಂಕಣಕಾರ ಇಂದ್ರಜಿತ್ ಲಂಕೇಶ್ , ಚಲನಚಿತ್ರ ನಟ ಅನಿರುದ್ಧ ಜತಕರ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ, ಮಿಸಸ್ ಯುನಿವರ್ಸ್ ಸುಧಾ ಎಂ ಸಂಗೀತ ನಿರ್ದೇಶಕ ಆಲ್ ಓಕೆ, ಬಿಎಸ್ ಅವಿನಾಶ್ ತರುಣ್ ಸುಧೀರ್ ನಿರೂಪಕ ನಿರಂಜನ್ ಉಪಸ್ಥಿತರಿದ್ದರು

ಇವರಿಗೆ ಈ ಹಿಂದೆ ಉದಯಟಿವಿ ಸಿರಿ ಪ್ರಶಸ್ತಿ, ಗೋಲ್ಡನ್ ಆಚಿವರ್ ಅವಾರ್ಡ್, ಶಿಕ್ಷಣ ರಾಷ್ಟ್ರೀಯ ರತ್ನ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಕೇಸರಿ ರತ್ನ ಪ್ರಶಸ್ತಿ , ಮಹಾತ್ಮ ಗಾಂಧಿ ಸಧ್ಬಾವನಾ ರಾಷ್ಟ್ರೀಯ ಪ್ರಶಸ್ತಿ, ರಾಜ್ಯಮಟ್ಟದ ಹೆಮ್ಮೆಯ ಕನ್ನಡಿಗ, ಸ್ಯಾಂಡಲ್ ವುಡ್ ಪಿಲ್ಮ ಫೇರ್ ಅವಾರ್ಡ್ , ರೋಟರಿ ಎಂಟರ್ಪ್ರಿನರ್ ಐಕಾನ್ ಅವಾರ್ಡ್ ಪಡೆದಿದ್ದಾರೆ


Spread the love

Leave a Reply