ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಓರ್ವ ಬ್ಲಾಕ್ ಮೇಲರ್ – ಪ್ರಮೋದ್ ಮಧ್ವರಾಜ್

Spread the love

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಓರ್ವ ಬ್ಲಾಕ್ ಮೇಲರ್ – ಪ್ರಮೋದ್ ಮಧ್ವರಾಜ್

ಉಡುಪಿ: ತನ್ನ ವಿರುದ್ದ ಚುನಾವಣೆ ಸಂದರ್ಭರ್ ಬ್ಯಾಂಕ್ ಲೋನ್ ಹಗರಣದ ಆರೋಪ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಓರ್ವ ಬ್ಲಾಕ್ ಮೇಲರ್ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿ.ಜೆ. ಅಬ್ರಾಹಂ ಬ್ಲಾಕ್ಮೇಲ್ ಮಾಡುವ ವ್ಯಕ್ತಿ. ನಾವು ಯಾರಿಗೂ ವಂಚನೆ ಮಾಡಿದವರಲ್ಲ. ನನ್ನ ತಂದೆಯ ಕಾಲದಿಂದ ಸಿಂಡಿಕೇಟ್ ಬ್ಯಾಂಕಿನಲ್ಲಿ ವ್ಯವಹಾರವನ್ನು ನಿರಂತರ ಮಾಡಿಕೊಂಡು ಬಂದಿರುತ್ತೇವೆ. ಸರಿಯಾದ ಆಸ್ತಿ ಅಡಮಾನ ಇಲ್ದೇ ಯಾವ ಬ್ಯಾಂಕೂ ಸಾಲ ಕೊಡಲ್ಲ. ಇದು ಸಂಪೂರ್ಣ ಸುಳ್ಳು ಆರೋಪ. ಕೇವಲ ಬ್ಲಾಕ್ ಮೇಲ್ ಮಾಡಲು, ಹಣ ಕೇಳಲು ಅಬ್ರಾಹಂ ಈ ರೀತಿ ಮಾಡುತ್ತಿದ್ದಾರೆ. ಅಬ್ರಾಹಂರನ್ನು ಜೈಲಿಗೆ ಹಾಕುವ ಉದ್ದೇಶದಿಂದ ಕ್ರಿಮಿನಲ್ ಕೇಸು ದಾಖಲಿಸಿದ್ದೇನೆ. ಅಗತ್ಯ ಬಿದ್ದರೆ 10 ಕೋಟಿ ಮಾನನಷ್ಟ ಮೊಕದ್ದಮೆ ಕೂಡ ದಾಖಲಿಸ ಲಾಗುವುದು ಎಂದರು.

ಅಬ್ರಾಹಂ ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ನನ್ನ ವಿರುದ್ಧ ಆರೋಪ ಮಾಡುತ್ತಿರುವುದರ ಹಿಂದೆ ಬಿಜೆಪಿಯವರ ಕೈವಾಡ ಇದೆ. ಇದು ಚುನಾವಣೆ ಸಂದರ್ಭ ಆಗಿರುವುದರಿಂದ ಬಿಜೆಪಿ ಅಭ್ಯರ್ಥಿಯ ಕಡೆಯವರೇ ಈ ರೀತಿ ಮಾಡಿಸಿರಬೇಕು. ನನ್ನ ವಿರುದ್ಧ ಯಾವುದೇ ಆರೋಪ ಮಾಡಲು ಇಲ್ಲದಕ್ಕೆ ಇಂತಹ ಸುಳ್ಳು ಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಪ್ರಮೋದ್ ಮಧ್ವ ರಾಜ್ ದೂರಿದರು.


Spread the love