ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಯುವಕನ ಬಂಧನ

Spread the love

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಯುವಕನ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪಣಂಬೂರು ಕ್ರೈಂ ವಿಭಾಗದ ಎಸ್ಐ ಕುಮಾರೇಶನ್ ಶುಕ್ರವಾರ ಬಂಧಿಸಿದ್ದಾರೆ.

ಬಂಧಿತನನ್ನು ಬೋಳೂರಿನ ನಿವಾಸಿ ಅನೀಶ್ ಅಮೀನ್ (24) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿದಾಗ ಆರೋಪಿ ತಪ್ಪಿಸಲು ಯತ್ನಿಸಿದ್ದು, ಹಿಡಿದು ವಿಚಾರಿಸಿದಾಗ ಮೊದಲು ತನ್ನ ಹೆಸರು ಅಜಿತ್ ಎಂದು ಹೇಳಿದ್ದು, ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ತನ್ನ ನಿಜ ಹೆಸರು ಹೇಳಿದ್ದು ಬಳಿಕ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.


Spread the love