ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ವಿಜೇತರೆಣಿಸಿದ ಸುರೇಖಾ ಹೇಮಂತ್ ದೇವಾಡಿಗ

Spread the love

ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ವಿಜೇತರೆಣಿಸಿದ ಸುರೇಖಾ ಹೇಮಂತ್ ದೇವಾಡಿಗ

ಮುಂಬಯಿ : ಮಹಾರಾಷ್ಟ್ರ ರಾಜ್ಯದ ನಾಸಿಕ್‍ನ ಮೀನಾಭಾೈ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 37ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ 45 ಪ್ಲಸ್ ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸಿದ ಸುರೇಖಾ ಹೇಮಂತ್ ದೇವಾಡಿಗ ಅವರು 4×100 ಮೀಟರ್ ರೀಲೆಯಲ್ಲಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, ಶಾಟ್‍ಫುಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ರಜತ ಪದಕ ಹಾಗೂ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ವಿಜೇತರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದೇರೆಬೈಲು ಕೊಂಚಾಡಿ ಮೂಲತಃ ಮುಚ್ಚೂರು ಸುಂದರ ದೇವಾಡಿಗ (ಸದ್ಯ ಸ್ವರ್ಗಸ್ಥರು) ಹಾಗೂ ಸಿಂಧು ಎಸ್.ದೇವಾಡಿಗ ದಂಪತಿಯ ಸುಪುತ್ರಿ ಆಗಿರುವ ಸುರೇಖಾ ಹೇಮಂತ್ ಸದ್ಯ ಮುಂಬಯಿ ದಾದರ್ ಪಶ್ಚಿಮದ ವರ್ಲಿ ನಿವಾಸಿ ಆಗಿದ್ದು, ಪ್ರಸ್ತುತ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ವಿದ್ಯಾಥಿರ್ü ಆಗಿದ್ದು ಕನ್ನಡ ವಿಭಾಗ ಮುಂಬಯಿ ವಿವಿ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ `ದೇವಾಡಿಗ ಜನಾಂಗದ ಒಂದು ಸಾಂಸ್ಕೃತಿಕ ಅಧ್ಯಯನ’ ಬಗ್ಗೆ ಎಂಫಿಲ್ ನಡೆಸುತ್ತಿದ್ದಾರೆ. ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾದರ್ಶಿ ಆಗಿ ಸೇವಾ ನಿರತರಾಗಿದ್ದಾರೆ.

ಚಾಂಪಿಯನ್ ಶಿಪ್‍ನ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತ ನೇಶನಲ್ ಮಾಸ್ಟರ್ಸ್ ಅಥ್ಲೆಟಿಕ್ (ಐಎಂಎ) ಕಾರ್ಯಾಧ್ಯಕ್ಷ ಟಿ.ಒ ಜಾಕೋಬ್ (ಐಪಿಎಸ್), ಕಾರ್ಯದರ್ಶಿ ಜೆರಾಲ್ಡ್ ಡಿಸೋಜಾ, ಸಂಘಟನಾ ಉಪಾಧ್ಯಕ್ಷ ನಿತಿನ್ ವಿಖಾರ್, ಸಂಘಟನಾ ಕಾರ್ಯದರ್ಶಿ ಸಂಜಯ್ ಚವ್ಹಾಣ್, ವಿಜಯ್ ಪಗಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಸುರೇಖಾ ದೇವಾಡಿಗ ಅವರಿಗೆ ಪದಕ ಪ್ರಶಸ್ತಿಗಳನ್ನಿತ್ತು ಅಭಿನಂದಿಸಿದರು.


Spread the love