ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

197

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಉಡುಪಿ : ನಗರದ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸೆನ್ ಅಪರಾಧ ಪೊಲೀಸರ ತಂಡ ಬಂಧಿಸಿದ್ದಾರೆ.

ಬಂಧಿತನನ್ನು ಸಾಸ್ತಾನ ಸಮೀಪದ ಗುಂಡ್ಮಿ ನಿವಾಸಿ ಶ್ರೀನಾಥ್ (28) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಉಡುಪಿಯ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ರಾಯಲ್ಸ್ ಅಂಬೆಸ್ಸಿ ಬಿಲ್ಡಿಂಗ್ ಹಿಂಬಾಗ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆತನ ಬಳಿ ಇದ್ದ 2 ಕಿಲೋ 100 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಮೊಬೈಲ್ ಸೇರಿ ಆತನ ಬಳಿ ಇದ್ದ 57,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಅವರ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕಾರದ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಸೆನ್ ಅಪರಾಧದ ಪೊಲೀಸ್ ನೀರಿಕ್ಷಕರಾದ ಸೀತಾರಾಮ.ಪಿ ಮತ್ತು ಎ.ಎಸ್.ಐ ಕೇಶವ್ ಗೌಡ,ಸಿಬ್ಬಂದಿಯವರಾದ ಪ್ರವೀಣ್ ,ಸತೀಶ್ ಬೆಳ್ಳೆ,ರಾಘವೇಂದ್ರ ಉಪ್ಪೂರು,ಕೃಷ್ಣ ಪ್ರಸಾದ್, ಸಂಜಯ್, ನಾಗೇಶ್, ಶ್ರೀಧರ, ರಾಘವೇಂದ್ರ ಬ್ರಹ್ಮಾವರ,ಪ್ರಸನ್ನ ಸಾಲಿಯಾನ್,ಸಂತೋಷ್ ಖಾರ್ವಿ,ಮತ್ತು ಜೀವನ್ ಪಾಲ್ಗೊಂಡಿದ್ದರು.

Leave a Reply

Please enter your comment!
Please enter your name here