ಸಾವಿನಲ್ಲೂ ತನ್ನ ರಾಜಕೀಯ ಶಕುನಿ ಬುದ್ಧಿ ತೋರಿಸಿದ ಬಿ.ಜೆ.ಪಿ – ಮಿಥುನ್ ರೈ

Spread the love

ಸಾವಿನಲ್ಲೂ ತನ್ನ ರಾಜಕೀಯ ಶಕುನಿ ಬುದ್ಧಿ ತೋರಿಸಿದ ಬಿ.ಜೆ.ಪಿ – ಮಿಥುನ್ ರೈ

ಮಂಗಳೂರು: ಕೊರೋನಾದಿಂದ ಸಾವನ್ನಪ್ಪಿದ ಹಿಂದೂ ಮಹಿಳೆಯ ಶವ ಸುಡಲು ಅವಕಾಶ ನೀಡದೆ ತನ್ನ ವೊಟ್ ಭದ್ರತೆಗಾಗಿ ಮನುಷ್ಯತ್ವವನ್ನು ಮರೆಯುವುದು ಎಷ್ಟು ಸರಿ ? ಎಂದು ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪ್ರಶ್ನಿಸಿದ್ದಾರೆ

ಕಾನೂನಿ ಪ್ರಕಾರ ಯಾವುದೇ ಆಸ್ಪತ್ರೆಯಲ್ಲಿ ರೋಗಿ ಸಾವನ್ನಪ್ಪಿದರೆ ಆ ಸಂಧರ್ಭದಲ್ಲಿ ಅಲ್ಲಿಗೆ ಹತ್ತಿರದಲ್ಲಿ ಇರುವ ಶ್ಮಾಸನದಲ್ಲಿ ಅಂತ್ಯಕ್ರಿಯೆ ನಡೆಸಬೇಕಾಗುತ್ತದೆ ಆದರೆ ಶಾಸಕ ಭರತ್ ಶೆಟ್ಟಿ ಕಾನೂನಿನ ಜ್ಞಾನ ಇಲ್ಲದಂತೆ ಅಮಾನವಿಯವಾಗಿ ವರ್ತಿಸಿರುವುದು ಮನುಜ ಕುಲಕ್ಕೆ ಒಂದು ಕಪ್ಪು ಚುಕ್ಕೆ.

ನಮ್ಮ ಸಹೋದರಿ ಸಮಾನಳಾದ ಹಿಂದೂ ಮಹಿಳೆಯ ಶವವನ್ನು ಹಿಡಿದುಕೊಂಡು ರಾತ್ರಿ ಇಡಿ ಅಳೆದಾಡುವಂತೆ ಮಾಡಿದ ಶಾಪ ನೀಮ್ಮನ್ನು ತಟ್ಟದೆ ಇರುತ್ತದೇಯೋ ?? ಅಧಿಕ್ಕಾರಕ್ಕೆ ಎರುವ ಮುಂಚೆ ಇರುವ ಹಿಂದೂಗಳ ಬಗೆಗಿನ ಕಾಳಜಿ ನಂತರ ಇರುವುದಿಲ್ಲ . ಜಿಲ್ಲಾಡಳಿತವು ಇಂಥವರ ತಾಳಕ್ಕೆ ತಕ್ಕಂತೆ ಕುಣಿಯುವುದು ವಿಪರ್ಯಾಸವೇ ಸರಿ.

ಹಿಂದೂ ಸಹೋದರಿಯ ಮೃತದೇಹವನ್ನು ಅಳೆದಾಡುವಂತೆ ಮಾಡಿ ಕೊನೆಗೆ ಸತ್ತ ನಂತರವೂ ನೆಮ್ಮದಿ ಇಲ್ಲದ ಹಾಗೆ ಮಾಡಿದ ಶಾಸಕರನ್ನು ಮನುಜ ಕುಲ ಯಾವತ್ತು ಮೆಚ್ಚುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

1 Comment

Comments are closed.