ಸಾಸ್ತಾನ ಚರ್ಚಿನಲ್ಲಿ ಸಂಭ್ರಮದ ಪರಮ ಪ್ರಸಾದ ಮೆರವಣಿಗೆ

Spread the love

ಸಾಸ್ತಾನ ಚರ್ಚಿನಲ್ಲಿ ಸಂಭ್ರಮದ ಪರಮ ಪ್ರಸಾದ ಮೆರವಣಿಗೆ

ಉಡುಪಿ: ಸಾಸ್ತಾನ ಸಂತ ಅಂತೋನಿಯವರ ಚರ್ಚಿನ ವಾರ್ಷಿಕ ಜಾತ್ರೆಯ ಪ್ರಯುಕ್ತ ಪರಮ ಪ್ರಸಾದ ಮೆರವಣಿಗೆ ಹಾಗೂ ಚರ್ಚ್ ಏಕತೆಯ ದಿನವನ್ನು ವಿಜೃಂಭಣೆಯಿಂದ ಭಾನುವಾರ ಆಚರಿಸಲಾಯಿತು.

ಚರ್ಚಿನಲ್ಲಿ ನಡೆದ ಬಲಿಪೂಜೆಯ ನೇತೃತ್ವವನ್ನು ಮಂಗಳೂರು ಬಿಕರ್ನಕಟ್ಟೆ ಬಾಲ ಯೇಸು ಮಂದಿರ ವಂ| ಲಿಗೋರಿ ಡಿ’ಸೋಜಾ ವಹಿಸಿದ್ದರು.

ದಿವ್ಯ ಬಲಿಪೂಜೆಯ ಬಳಿಕ ಪವಿತ್ರ ಪರಮ ಪ್ರಸಾದವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆಗೆದುಕೊಂಡು ಹೋಗಿ, ಬಳಿಕ ಮಾಬುಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಸಾರ್ವಜನಿಕವಾಗಿ ಪರಮಪ್ರಸಾದಕ್ಕೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭ ಸಾಸ್ತಾನ ಚರ್ಚಿನ ಧರ್ಮಗುರು ವಂ|ಜಾನ್ ವಾಲ್ಟರ್ ಮೆಂಡೊನ್ಸಾ, ಧರ್ಮಗುರು ವಂ|ಸ್ಟೀವನ್ ಡಿಸೋಜಾ ಹಾಗೂ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ಚರ್ಚಿನ ವಾರ್ಷಿಕ ಜಾತ್ರೆ ಜನವರಿ 2 ಮತ್ತು 3 ರಂದು ವಿಜೃಂಭಣೆಯಿಂದ ನಡೆಯಿಲಿದೆ.


Spread the love