ಸಾಸ್ತಾನ ಸಂತ ಅಂತೋನಿ ಶಾಲೆ ವಾರ್ಷಿಕ ಕ್ರೀಡಾಕೂಟ ; ವಿದ್ಯಾರ್ಥಿಗಳ ವಿಕಸನಕ್ಕೆ ಕ್ರೀಡೆ ಸಹಕಾರಿ – ಭುಜಂಗ ಶೆಟ್ಟಿ
ಕುಂದಾಪುರ: ವಿದ್ಯಾರ್ಥಿಗಳ ಜೀವನದಲ್ಲಿ ಸರ್ವತೋಮುಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನವಾಗಬೇಕಾದ ಕ್ರೀಡೆ ಅತ್ಯಂತ ಸಹಕಾರಿ ಮಾಧ್ಯಮವಾಗಿದೆ ಎಂದು ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಭುಜಂಗ ಶೆಟ್ಟಿ ಹೇಳಿದರು.
 
  
  
  
  
  
  
  
  
  
  
  
  
  
  
 
ಅವರು ಶನಿವಾರ ಸಾಸ್ತಾನ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಕೇವಲ ದೈಹಿಕ ಬೆಳವಣಿಗೆ ಮಾತ್ರ ಸಹಕಾರಿಯಾಗದೆ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಕೂಡ ಸಹಾಕಾರಿಯಾಗಿದೆ. ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದು ಅದು ಕೆಲವೊಮ್ಮೆ ನಮಗೆ ತಿಳಿದಿರುವುದಿಲ್ಲ. ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ನಮ್ಮಲ್ಲಿರುವ ಸಾಮಥ್ಯವನ್ನು ತಿಳಿಯಲು ಸಹಕಾರಿಯಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಸ್ಥಿತಿಯನ್ನು ಕ್ರೀಡಾಳುಗಳು ಹೊಂದಿರಬೇಕು. ಸತತ ಪ್ರಯತ್ನದಿಂದ ಗೆಲುವ ಶತ ಸಿದ್ದ. ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ಇರುವುದೇ ನಿಜವಾದ ಕ್ರೀಡಾ ಸ್ಪೂರ್ತಿಯಾಗಿದೆ. ಸೋತಾಗ ತಮ್ಮನ್ನೇ ತಾವು ಆತ್ಮವಿಮರ್ಸೆ ಮಾಡಿಕೊಂಡು ಸೋಲಿನ ಕಾರಣವನ್ನು ಹುಡುಕಿಕೊಂಡು ಮತ್ತೊಮ್ಮೆ ಪ್ರಯತ್ನಿಸಿದಾಗ ಗೆಲುವು ನಮ್ಮದಾಗುತ್ತದೆ. ಸದೃಢವಾದ ದೇಹದಲ್ಲಿ ಸಬಲ ಮನಸ್ಸಿರುತ್ತದೆ ಎಂಬ ವಿವೇಕಾನಂದರ ಹೇಳಿಕೆಯಂತೆ ಕ್ರೀಡೆಯಿಂದ ಉತ್ತ ದೇಹದಾರ್ಢ್ಯವನ್ನು ಹೊಂದಬಹುದು ಅಲ್ಲದೆ ಲವಲವಿಕೆಯಿಂದ ಇರಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ವಂ|ಜಾನ್ ವಾಲ್ಟರ್ ಮೆಂಡೊನ್ಸಾ ವಹಿಸಿದ್ದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೂಯಿಸ್ ಎನ್ ಡಿಸೋಜಾ, ಚರ್ಚಿನ ಪಾಲನಾ ಮಂಡಳಿಯ ಕಾರ್ಯದರ್ಶಿ ಮ್ಯಾಕ್ಷಿಮ್ ಲೂಯಿಸ್ ಡಿಸೋಜಾ ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೂಲಿ ಫೆರ್ನಾಂಡಿಸ್ ಸ್ವಾಗತಿಸಿ, ಶಿಕ್ಷಕಿ ಆಶಾಜ್ಯೋತಿ ವಂದಿಸಿದರು. ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು.
 
            
