ಸಿದ್ದಗಂಗಾ ಸ್ವಾಮೀಜಿ ನಿಧನ – ಮಂಗಳೂರು ಬಿಷಪ್ ಸಂತಾಪ

Spread the love

ಸಿದ್ದಗಂಗಾ ಸ್ವಾಮೀಜಿ ನಿಧನ – ಮಂಗಳೂರು ಬಿಷಪ್ ಸಂತಾಪ

ಮಂಗಳೂರು: ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ಲಿಂಗೈಕ್ಯರಾಗಿರುವುದಕ್ಕೆ ರಾಜ್ಯವೇ ಶೋಕದಲ್ಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದು ಅದರಂತೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಪೀಟರ್ ಪಾವ್ಲ್ ಸಲ್ಡಾನಾ ಸಂತಾಪ ಸೂಚಿಸಿದ್ದಾರೆ.

ಸಿದ್ದಗಂಗಾ ಶ್ರೀಗಳು ಇನ್ನಿಲ್ಲ ಎನ್ನುವ ಸುದ್ದಿ ಆಘಾತ ತಂದಿದೆ. ಅವರನ್ನು ಎಲ್ಲ ಧರ್ಮ, ವರ್ಗದ ಜನರು ಆರಾಧಿಸುತ್ತಿದ್ದರು. ಅವರು ಇನ್ನಿಲ್ಲವಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದ್ದು, ಕೋಟ್ಯಂತರ ಭಕ್ತರನ್ನು ಅವರು ಅಗಲಿದ್ದಾರೆ. ಸಮಾಜಕ್ಕಾಗಿ ಅವರ ಕೊಡಿಗೆ ಅನನ್ಯ, ಶಿಕ್ಷಣ, ಆರೋಗ್ಯ ಮೂಲಕ ಜನರ ಜೀವನಮಟ್ಟ ಸುಧಾರಿಸಲು ಶ್ರೀಗಳು ಶ್ರಮಿಸಿದ್ದರು ಎಂದಿದ್ದಾರೆ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನೇ ತೊಡಗಿಸಿಕೊಂಡು ಬಡವರ ಸರ್ವಾತೊಮುಖ ಏಳಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು ನಮ್ಮನಗಲಿದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಅವರ ಜೀವನ ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love