ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗರಿಗಿಲ್ಲ  : ಮಂಜುನಾಥ ಭಂಡಾರಿ

Spread the love

ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗರಿಗಿಲ್ಲ  : ಮಂಜುನಾಥ ಭಂಡಾರಿ

ಮಂಗಳೂರು: ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ ಮತ್ತು ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗರಿಗಿಲ್ಲ. ಸಿಎಂ ರಾಜೀನಾಮೆ ಕೇಳುವ ಮೊದಲು ಇವ್ರ ಸರ್ಕಾರದ ಸಮಯ ಏನು ಮಾಡಿದ್ದಾರೆ ಎಂಬುದನ್ನು ಮೊದಲು ಆಲೋಚಿಸಲಿ.ನಿಮಗೆ ತಾಕತ್ತ ಇದ್ರೆ ಕುಮಾರ ಸ್ವಾಮಿ ಮೇಲೆ ಅಪವಾದ ಇದೆ ಅದನ್ನು ತನಿಖೆಗೆ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಮೂಡ ಹಗರಣ ಪ್ರಕರಣ ಬಿಜೆಪಿಯಿಂದ ಸಿಎಂ ರಾಜೀನಾಮೆ ಪಟ್ಟು ವಿಚಾರವಾಗಿ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸರ್ಕಾರ ಅಸ್ಥಿರ ಗೊಳಿಸಲು ಬಿಜೆಪಿ ಮುಂದಾಗಿದೆ. ಯಡಿಯೂರಪ್ಪ ಅವರ ಮೇಲೆ ರಾಜ್ಯಪಾಲರು ಪ್ರಾಶ್ಯುಕ್ಯೂಷನ್ ಅನುಮತಿ ನೀಡಿದ್ರು ಆದ್ರೆ ಆ ವೇಳೆ ಅವರ ಮೇಲೆ ಎಫ್ಐಆರ್ ಆಗಿತ್ತು ಆಗ ಯಡಿಯೂರಪ್ಪ ರಾಜಿನಾಮೆ ಕೊಟ್ಟಿದ್ದರಾ…? ತನಿಖೆ ಸಾಬಿತಾದ ಬಳಿಕ ಯಡಿಯೂರಪ್ಪ ರಾಜಿನಾಮೆ ನೀಡಿದ್ರು. ನಿಮಗೆ ಒಂದು ನ್ಯಾಯ ನಮಗೊಂದು ನ್ಯಾಯವೇ…? ಎಂದುಸವಾಲು ಹಾಕಿದ ಅವರು ಸಿದ್ದರಾಮಯ್ಯ ವಿರುದ್ಧ ಮಾಡಿದ ಆರೋಪದ ಬಗ್ಗೆ ಕಾನೂನಾತ್ಮಕವಾಗಿ ಹೋರಾಡಲಿದ್ದೇವೆ.

ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯನ್ನೊಂದಿಗೆ ಇದೆ. ಬಿಜೆಪಿ ಎಲ್ಲಿ ಅಧಿಕಾರದಲ್ಲಿ ಇಲ್ಲವೋ ಅಲ್ಲಿ ಇವ್ರು ಈ ರೀತಿಯ ಮಾಡುತ್ತಾರೆ‌. ಪ್ರಧಾನಿ ಕೂಡಾ ಭಾಷಣದಲ್ಲಿ ಕರ್ನಾಟಕದ ಬಗ್ಗೆ ಮಾತನಾಡ್ತಾರೆ‌. ಪ್ರಧಾನಿ ಚುನಾವಣಾ ಭಾಷಣದಲ್ಲಿ ನೀಡುವ ಹೇಳಿಕೆ ರಾಜ್ಯಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಅವರು ನೀವು ಚುನಾವಣೆಯನ್ನು ರಾಜಕೀಯವಾಗಿಯೇ ಬಳಸ್ತೀರಿ ನಿಮಗೆ ತಾಕತ್ತ ಇದ್ರೆ ಕುಮಾರ ಸ್ವಾಮಿ ಮೇಲೆ ಅಪವಾದ ಇದೆ ಅದನ್ನು ತನಿಖೆಗೆ ನೀಡಲಿ ಎಂದು ಸವಾಲು ಹಾಕಿದರು. ಪದ್ಮರಾಜ್ ಆರ್, ಶಾಲೆಟ್ ಪಿಂಟೋ,,ಮನೋರಾಜ್, ರಾಜೀವ್

ಜೋಕಿಮ್ ಡಿ ಸೋಜಾ, ಸುಹಾನ್ ಆಳ್ವಾ, ಶುಭಾಶಚಂದ್ರ ಶೆಟ್ಟಿ ಕೊಲ್ನಾಡ್,ಲಾರೆನ್ಸ್ ಡಿಸೋಜಾ,ವಿಕಾಸ್ ಶೆಟ್ಟಿ, ಟಿ ಕೆ ಸುಧೀರ್,ಶುಭೋದಯ ಆಳ್ವಾ,ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು


Spread the love
Subscribe
Notify of

0 Comments
Inline Feedbacks
View all comments