ಸಿದ್ದಾಪುರ: ಸಿಡಿಲು ಬಡಿದು ವ್ಯಕ್ತಿ ಮೃತ್ಯು

Spread the love

ಸಿದ್ದಾಪುರ: ಸಿಡಿಲು ಬಡಿದು ವ್ಯಕ್ತಿ ಮೃತ್ಯು

ಕುಂದಾಪುರ: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಸಿದ್ದಾಪುರ ಗ್ರಾಮದ ಸುರೇಶ ಶೆಟ್ಟಿ (38) ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆಯ ವೇಳೆ ಉಡುಪಿ ಜಿಲ್ಲೆಯಾದ್ಯಂತ ಹಲವೆಡೆ ಮಳೆಯಾಗಿದ್ದು ಕುಂದಾಪುರ ತಾಲೂಕಿನಲ್ಲಿ ಕೂಡ ಭಾರಿ ಮಳೆಯಾಗಿದೆ. ಸುರೇಶ್ ಶೆಟ್ಟಿ ಅವರು ತಮ್ಮ ಕಿರಿಯ ಮಗನೊಂದಿಗೆ ತಮ್ಮ ಮನೆಯ ಸಮೀಪವಿರುವ ಮರದಿಂದ ಮಾವಿನಕಾಯಿ ಕೀಳಲು ಹೊರಟಿದ್ದರು. ಇದ್ದಕ್ಕಿದ್ದಂತೆ, ಸಿಡಿಲು ಬಡಿದು, ಅಕಾಲಿಕ ಮರಣಕ್ಕೆ ಕಾರಣವಾಯಿತು. ಅದೃಷ್ಟವಶಾತ್ ಜೊತೆಗಿದ್ದ ಕಿರಿಯ ಮಗ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೆಣ್ಣಬೈಲು ಮೂಲದ ಬಸವ ಶೆಟ್ಟಿ ಅವರ ಪುತ್ರ ಸುರೇಶ್ ಶೆಟ್ಟಿ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಉದ್ಯೋಗಿಯಾಗಿದ್ದರು. ಮಗನ ಹುಟ್ಟುಹಬ್ಬ ಆಚರಿಸಲು ಮನೆಗೆ ಬಂದಿದ್ದ ಅವರು ಪತ್ನಿಯ ನಿವಾಸದಲ್ಲಿ ತಂಗಿದ್ದರು.

ಮೃತರು ಪತ್ನಿ ವಿನೋದ, ಎಂಟು ವರ್ಷದ ಸುಮೋದ್ ಮತ್ತು ನಾಲ್ಕು ವರ್ಷದ ಮಗ ಸರ್ವದಾ ಅವರನ್ನು ಅಗಲಿದ್ದಾರೆ.

ಈ ಘಟನೆ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Spread the love

Leave a Reply