ಸಿದ್ಧಾರ್ಥ್ ಮರಣೋತ್ತರ ಪರೀಕ್ಷೆ ಪೂರ್ಣ; ಮೃತದೇಹ ಚಿಕ್ಕಮಗಳೂರಿಗೆ

ಸಿದ್ಧಾರ್ಥ್ ಮರಣೋತ್ತರ ಪರೀಕ್ಷೆ ಪೂರ್ಣ; ಮೃತದೇಹ ಚಿಕ್ಕಮಗಳೂರಿಗೆ

ಮಂಗಳೂರು : ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ವಿ.ಜಿ.ಸಿದ್ಧಾರ್ಥ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮೃತದೇಹವನ್ನು ಚಿಕ್ಕಮಗಳೂರಿನತ್ತ ಕೊಂಡೊಯ್ಯಲಾಯಿತು.

ಇಂದು ಬೆಳಗ್ಗೆ ನಗರದಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆರಂಭಗೊಂಡ ಮರಣೋತ್ತರ ಪರೀಕ್ಷೆಯು 10:30ರ ಸುಮಾರಿಗೆ ಪೂರ್ಣಗೊಂಡಿತು. ಬಳಿಕ ವೆನ್ಲಾಕ್ ಆಸ್ಪತ್ರೆಯಿಂದ ಆಯಂಬುಲೆನ್ಸ್ ಮೂಲಕ ಮೃತದೇಹವನ್ನು 10:48ಕ್ಕೆ ಸಾಗಿಸಲಾಯಿತು.

ಮೃತದೇಹವನ್ನು ಚಾರ್ಮಾಡಿ ಘಾಟ್ ರಸ್ತೆಯಾಗಿ ಚಿಕ್ಕಮಗಳೂರಿಗೆ ಕೊಂಡೊಯ್ಯಲಾಗುತ್ತಿದೆ. ಎರಡು ಆಯಂಬುಲೆನ್ಸ್‌ಗಳು ಈಗಾಗಲೇ ಚಿಕ್ಕಮಗಳೂರಿನತ್ತ ಹೊರಟಿದ್ದು, ಸುಮಾರು ನಾಲ್ಕೂವರೆ ಗಂಟೆಗಳ ಪಯಣದಲ್ಲಿ ಅಲ್ಲಿ ತಲುಪಲಿದೆ