ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟಕ್ಕೆ ರಾಷ್ಟ್ರ ಪ್ರಶಸ್ತಿ

Spread the love

ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟಕ್ಕೆ ರಾಷ್ಟ್ರ ಪ್ರಶಸ್ತಿ

ಉಡುಪಿ: ಕ್ರೈಸ್ತ ಧರ್ಮಪ್ರಾಂತ್ಯದ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟಕ್ಕೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ.

ರಾಷ್ಟ್ರೀಯ ಸ್ತ್ರೀ ಆಯೋಗ, ಅಖಿಲ ಭಾರತೀಯ ಕೆಥೊಲಿಕ್ ಬಿಷಪ್ ಮಂಡಳಿಯು ನಡೆಸಿದ 4ನೇ ರಾಷ್ಟ್ರ ಮಟ್ಟದ ಮಹಿಳಾ ಸಮ್ಮೇಳನ ಲಕ್ನೋದ ನವಿಂತಾ ಧರ್ಮ ಕೇಂದ್ರ ದಲ್ಲಿ ನಡೆದಿದ್ದು ಭಾರತೀಯ ಬಿಷಪ್ ಮಂಡಳಿಯ ಅಧ್ಯಕ್ಷರಾದ ಪಾಂಡಿಚೇರಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ರೆ. ಫ್ರಾನ್ಸಿಸ್ ಕಾಲಿಸ್ತ್ ಉಡುಪಿ ಧರ್ಮಪ್ರಾಂತ್ಯದ ಸ್ತೀ ಸಂಘಟನೆಯ ಅಧ್ಯಕ್ಷೆ ಅನಿತಾ ಡಾಯಸ್ ಅವರಿಗೆ ಪ್ರದಾನ ಮಾಡಿದರು.

ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ ಸ್ತ್ರೀ ಸಬಲೀಕರಣ, ಸ್ತ್ರೀಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು ಇದರ ಸಾಧನೆಗೆ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಸಂದರ್ಭ ಸಂಪದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಉಡುಪಿ ಧರ್ಮಪ್ರಾಂತ್ಯ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ನಿರ್ದೇಶಕರೂ ಆದ ವಂದನೀಯ ಧರ್ಮಗುರು ರೆಜಿನಾಲ್ಡ್ ಪಿಂಟೊ ರವರು ಉಪಸ್ಥಿತರಿದ್ದರು.


Spread the love