ಸುಟ್ಟ ಹೂವು

Spread the love

ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಾದ ಅತ್ಯಾಚಾರವನ್ನು ಖಂಡಿಸುತ್ತಾ

*ಸುಟ್ಟ ಹೂವು*

ಮತ್ತೊಮ್ಮೆ ಸುಟ್ಟಿರುವ
ಹೂವಿನ ವಾಸನೆ
ನಾಸಿಕದೊಳಗೆ ಮನೆ ಮಾಡಿಕೊಂಡಾಗ
ಕಾಣುವ ಕಲ್ಪನೆಗಳೆಲ್ಲ
ನೆತ್ತರಿನಲ್ಲಿ ಅರಳಿದ ಸುಮದಂತೆ…!!

ಕಣ್ಣಿಂದ ಹರಿವ
ತೈಲ ಬಾಳನ್ನು ಸುಡುವಾಗ
ಮತ್ತೆ ಮತ್ತೆ ಗಂಟಲಿಗೆ
ಹೊಸ ಗಟ್ಟಿ ವಾದ್ಯದ ಕೆಲಸ..
ಅವಳ ಮನಸ್ಸು ಮೌನ…!!!!

ಹಸಿದ ನಾಯಿಗಳಿಗೆ
ಬೆದೆಯ ಕಾಲದಲಿ ಬೆಂದ
ಮಾಂಸ ದಾರಿ ಮಧ್ಯೆ
ಸಿಕ್ಕಾಗ ಬಗೆವ ಬಗೆಯಲಿ
ದಾರಿಯಲ್ಲಿ ಹೊಸ ಕುಳಿ ಬಿದ್ದಿರಲು..!

ರೋಧಿಸುವ ಮೌನ
ಗರ್ಜಿಸುವ ಧ್ವನಿಗಳಿಗೆ
ಶರಣಾಗಿ ಚೂರದ ತರಗೆಲೆಗಳಂತೆ
ಹೆಮ್ಮರದ ಕಾಂಡದಡಿಯಲಿ
ನೋವಿನೊಡಲಲಿ
ರಕ್ತದೋಕುಳಿಯ ಆಟ ಸಾಗುತ್ತಿದೆ…!!

*#ಪ್ರೇಮಾತ್ಮ*
*ಗಣೇಶ್ ಅದ್ಯಪಾಡಿ*
  ಮಂಗಳೂರು


Spread the love