ಸುರತ್ಕಲ್ ಕಾಟಿಪಳ್ಳ ನಿವಾಸಿ ಸಂತೋಷ್ ಕುಮಾರ್ ಕಾಣೆ: ಪತ್ತೆಗೆ ಪೊಲೀಸರ ಮನವಿ
ಮಂಗಳೂರು: ನಗರದ ಸುರತ್ಕಲ್ ಕಾಟಿಪಳ್ಳ ನಿವಾಸಿ ಸಂತೋಷ್ ಕುಮಾರ್(43) ಎಂಬವರು ಕಾಣೆಯಾಗಿದ್ದು, ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಪರಿಚಿತನಾದ ದೀಪಿತ್ ಎಂಬವನೊಂದಿಗೆ ಮೂರು ತಿಂಗಳ ಹಿಂದೆ ಚಿಕ್ಕ ಗಲಾಟೆಯಾಗಿದ್ದು, ಈ ವಿಷಯದಲ್ಲಿ ಸಂತೋಷ ಕುಮಾರ್‍ರವರು ಮನಸ್ತಾಪ ಮಾಡಿಕೊಂಡಿದ್ದರು. ನವೆಂಬರ್ 7 ರಂದು ಮನೆ ಬಿಟ್ಟು ಹೋಗಿ ಅಣ್ಣನಿಗೆ ವ್ಯಾಟ್ಸ್‍ಆಪ್ ಮೂಲಕ “ಅಣ್ಣ ನನ್ನನ್ನು ಕ್ಷಮಿಸು ತಾಯಿಯನ್ನು ಚೆನ್ನಾಗಿ ನೋಡಿಕೊ ತಾನು ಸಾಯುವ ನಿರ್ಧಾರ ಮಾಡಿರುವುದಾಗಿ ತನ್ನ ಸಾವಿಗೆ ದೀಪಿತ್ ಮತ್ತು ಮಹೇಂದ್ರ” ರವರು ಕಾರಣ ಎಂದು ಮೇಸೆಜ್ ಮಾಡಿದ್ದು, ನಂತರ ಆತನ ಮೊಬೈಲ್ ಸ್ವಿಚ್ ಆಪ್ ಆಗಿರುತ್ತದೆ
ಕಾಣೆಯಾದವರ ಚಹರೆ: ಎತ್ತರ: 6.3 ಅಡಿ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕಪ್ಪು ಕೂದಲು ಹೊಂದಿರುತ್ತಾರೆ. ಕಾಣೆಯಾದ ದಿನ ಸ್ಕೈ ಬ್ಲ್ಯೂ ತುಂಬು ತೋಳಿನ ಟಿ-ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಸುರತ್ಕಲ್ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













