ಸುರತ್ಕಲ್: 10ನೇ ತರಗತಿಯ ಪೂರ್ವಸಿದ್ದತಾ ಪರೀಕ್ಷೆ ಬರೆದು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ

Spread the love

ಸುರತ್ಕಲ್: 10ನೇ ತರಗತಿಯ ಪೂರ್ವಸಿದ್ದತಾ ಪರೀಕ್ಷೆ ಬರೆದು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ

ಮಂಗಳೂರು: ಸುರತ್ಕಲ್ ಸಮೀಪದ ಖಾಸಗಿ ಶಾಲೆಯ ಹತ್ತನೇ ತರಗತಿಯ ಪೂರ್ವಸಿದ್ದತಾ ಪರೀಕ್ಷೆ ಬರೆದು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ನಾಪತ್ತೆಯಾಗಿರುವ ವಿದ್ಯಾರ್ಥಿಗಳನ್ನು ಯಶ್ವಿತ್ , ನಿರೂಪ್, ಅನ್ವೀತ್ ಮತ್ತು ರಾಘವೇಂದ್ರ ಎಂದು ಗುರುತಿಸಲಾಗಿದೆ.

ನಾಲ್ವರು ವಿದ್ಯಾರ್ಥಿಗಳು ಶಾಲೆಯಲ್ಲಿ ಹತ್ತನೇ ತರಗತಿಯ ಪೂರ್ವ ಸಿದ್ದತಾ ಪರೀಕ್ಷೆಯನ್ನು ಬರೆದಿದ್ದು ಮಧ್ಯಾಹ್ನ 1.30 ಸುಮಾರಿಗೆ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುರತ್ಕಲ್ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ಹುಡುಕಾಟ ಆರಂಭಿಸಿದ್ದಾರೆ.


Spread the love