ಸುಳ್ಯದಲ್ಲಿ ಅಕ್ರಮ ಗಾಂಜಾ ವ್ಯವಹಾರ ಇಬ್ಬರ ಬಂಧನ

Spread the love

ಸುಳ್ಯದಲ್ಲಿ ಅಕ್ರಮ ಗಾಂಜಾ ವ್ಯವಹಾರ ಇಬ್ಬರ ಬಂಧನ

ಸುಳ್ಯ: ಅಕ್ರಮ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಪಿಐಡಿಸಿಐಬಿ ಪೋಲಿಸರು ಸುಳ್ಯದಲ್ಲಿ ಇಬ್ಬರನ್ನು ಶನಿವಾರ ಬಂಧಿಸಿದ್ದಾರೆ.

ಬಂಧಿತರನ್ನು ಸುಳ್ಯ ನಿವಾಸಿ ತೀರ್ಥಪ್ರಸಾದ (25) ಮತ್ತು ಪುತ್ತುರು ನಿವಾಸಿ ವಿನಾಯಕ (30) ಎಂದು ಗುರುತಿಸಲಾಗಿದೆ

ಶನಿವಾರದಂದು ರಂದು ಸುನೀಲ್ ವೈ. ನಾಯಕ್, ಪಿ.ಐ ಡಿ.ಸಿ.ಐ.ಬಿ ಮಂಗಳೂರು ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸುಳ್ಯ ಪೇಟೆಯಲ್ಲಿ ಕೆ.ಎ-21-ಕ್ಯೂ-0266 ನೇ ನಂಬ್ರದ ಅಪಾಚಿ ಮೋಟಾರು ಸೈಕಲ್ ಮತ್ತು ಕೆ.ಎ-21-ಎ-8353 ನೇ ನಂಬ್ರದ ಅಟೋ ರಿಕ್ಷಾದಲ್ಲಿ ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ವ್ಯವಹಾರ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸಿಬ್ಬಂದಿಗಳೊಂದಿಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಮಾಹಿತಿಯಲ್ಲಿ ತಿಳಿಸಿದ್ದ ವಾಹನಗಳು ಹಾಗೂ ಇಬ್ಬರೂ ಆರೋಪಿಗಳು ಓಡಲು ಪ್ರಯತ್ನಿಸಿದವರನ್ನು ಬೆನ್ನಟ್ಟಿ ಸುತ್ತುವರಿದು ಹಿಡಿದು ಬಂಧಿಸಲಾಗಿದೆ.

ತೀರ್ಥ ಪ್ರಸಾದ್ ಎಂಬಾತನ ಮೇಲೆ ಸುಳ್ಯ ಠಾಣೆಯಲ್ಲಿ 2 ಗಾಂಜಾ ಪ್ರಕರಣಗಳು ದಾಖಲಾಗಿದ್ದು, ವಿನಾಯಕ ಎಂಬಾತನ ಮೇಲೆ ಪುತ್ತೂರು ನಗರ ಠಾಣೆಯಲ್ಲಿ 1 ಗಾಂಜಾ ಪ್ರಕರಣ ದಾಖಲಾಗಿದ್ದು, ಈ ಇಬ್ಬರು ಗಾಂಜಾ ಪ್ರಕರಣದ ಹಳೆ ಆರೋಪಿಗಳಾಗಿದ್ದಾರೆ. ಸದ್ರಿಯವರನ್ನು ದಸ್ತಗಿರಿ ಮಾಡಿದ್ದು ಸದ್ರಿಯವರ ವಶದಲ್ಲಿದ್ದ ಸುಮಾರು 1 ಕೆ.ಜಿ 394 ಗ್ರಾಂ ನಷ್ಟು ಗಾಂಜಾವನ್ನು ಹಾಗೂ ಸದ್ರಿ ಗಾಂಜಾವನ್ನು ಸಾಗಾಟ ಮತ್ತು ಮಾರಾಟ ಮಾಡುವರೇ ಉಪಯೋಗಿಸಿದ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ರೂ 2,42,190/- ರೂ. ಆರೋಪಿ ಮತ್ತು ಸೊತ್ತುಗಳನ್ನು ,ಸುಳ್ಯ ಪೊಲೀಸ್ ಠಾಣೆಗೆ ಸೂಕ್ರ ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.

ಈ ಪತ್ತೆಕಾರ್ಯವನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಬಿ.ಆರ್ ರವಿಕಾಂತೇ ಗೌಡ ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ವಿ ಜೆ ಸಜಿತ್ ರವರ ಸೂಚನೆಯಂತೆ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಸುನೀಲ್ ವೈ ನಾಯಕ್ರವರ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ, ನಾರಾಯಣ, ಉದಯ ಗೌಡ, ಪ್ರವೀಣ್ ಎಂ, ತಾರಾನಾಥ್ ಎಸ್, ಪ್ರವೀಣ್ ರೈ, ಶೋನ್ಶಾ ಮತ್ತು ಸುರೇಶ್ ರವರು ಭಾಗವಹಿಸಿರುತ್ತಾರೆ.


Spread the love