ಸುಶಾಂತ್ ಅನಿಲ್ ಲೋಬೊ ಅವರಿಗೆ ಆಸ್ಪಿರಿಂಗ್ ಮೈಂಡ್ಸ್ `ಕೆರಿಯರ್ ಗುರು ಅಫ್ ಮಂತ್’ ಪ್ರಶಸ್ತಿ

Spread the love

ಸುಶಾಂತ್ ಅನಿಲ್ ಲೋಬೊ ಅವರಿಗೆ ಆಸ್ಪಿರಿಂಗ್ ಮೈಂಡ್ಸ್ `ಕೆರಿಯರ್ ಗುರು ಅಫ್ ಮಂತ್’ ಪ್ರಶಸ್ತಿ

ಮೂಡಬಿದ್ರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉದ್ಯೋಗ ಹಾಗೂ ತರಬೇತಿ ವಿಭಾಗದ ಮುಖ್ಯಸ್ಥರಾದ  ಸುಶಾಂತ್ ಅನಿಲ್ ಲೋಬೋ ಇವರು ವಿದ್ಯಾರ್ಥಿಗಳಲ್ಲಿ ಉದ್ಯೋಗ ಶೀಲತೆಯ ದಕ್ಷತೆಯನ್ನು ಉತ್ತೇಜಿಸುವುದರೊಂದಿಗೆ ಉದ್ಯೋಗವಕಾಶಕ್ಕೆ ಪೂರಕವಾದ ವಾತವರಣವನ್ನು ನಿರ್ಮಿಸಿ , ಹೆಚ್ಚಿನ ಸಂಖ್ಯೆಯಲ್ಲಿ ಇಂಜಿನಿಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳನ್ನು ಉದ್ಯೋಗಾರ್ಹರನ್ನಾಗಿ ಮಾಡಲು ಪಟ್ಟ ನಿಸ್ವಾರ್ಥ ಶ್ರಮವನ್ನು ಪರಿಗಣಿಸಿ, ಭಾರತದ ಹೆಸರಾಂತ ಉದ್ಯೋಗ ಸಮೀಕ್ಷಾ ಸಂಸ್ಥೆಯಾದ ಆಸ್ಪಿರಿಂಗ್ ಮೈಂಡ್ಸ್ `ಕೆರಿಯರ್ ಗುರು ಅಫ್ ಮಂತ್’ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

2017-18ರ ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್ ತಾಂತ್ರಿಕ ವಿದ್ಯಾಲಯವು ಸುಮಾರು 530 ವಿದ್ಯಾರ್ಥಿಗಳನ್ನು ಉದ್ಯೋಗವಕಾಶಕ್ಕೆ ನೋಂದಾಯಿಸಿದ್ದು, ಈಗಾಗಲೇ ಶೇಕಡಾ 80ರಷ್ಟು ಅರ್ಹ ವಿದ್ಯಾರ್ಥಿಗಳು ವಿವಿಧ ವಿಭಾಗದಿಂದ ಕಂಪನಿಗಳಿಗೆ ನೇಮಕಾತಿ ಹೊಂದಿದ್ದಾರೆ.


Spread the love