ಸುಹಾಸ್ ಶೆಟ್ಟಿ ಕೊಲೆ : ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಬರಹ ಹಾಕಿದ ವ್ಯಕ್ತಿಯ ಬಂಧನ
ಮಂಗಳೂರು: ನಗರ ಬಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ live ಯೂ ಟ್ಯೂಬ್ ನ್ಯೂಸ್ 18 ಚಾನಲ್ ನಲ್ಲಿ Mr silent Lvr ಎಂಬ ಹೆಸರಿನ ವ್ಯಕ್ತಿಯು “ಎರಡು ದಿನ ಆದ ಮೇಲೆ ಮಂಗಳೂರಿನಲ್ಲಿ ಹೆಣ ಬೀಳುವುದು ಸತ್ಯ ಅದರಲ್ಲಿ ಸರತ್ಕಲ್ ನ ಕೋಡಿಕೆರೆ ಜನ ಬಿಡೋ ಮಾತೆ ಇಲ್ಲ” ಎಂದು ಕಾಮೆಂಟ್ ಹಾಕಿರುವುದಾಗಿದೆ. ಅದರಂತೆ ಸದ್ರಿ ಕಾಮೆಂಟಿನ ಆಧಾರದಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 46/2025 ಕಲಂ. 353 (2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಿದ್ದು, ಸದ್ರಿ ಪ್ರಕರಣವನ್ನು ಮುಂದಿನ ತನಿಖೆಯ ಸಲುವಾಗಿ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಸದ್ರಿ ಪ್ರಕರಣದಲ್ಲಿ ತನಿಖೆ ಕೈಗೊಂಡು live ಯೂ ಟ್ಯೂಬ್ ನ್ಯೂಸ್ 18 ಚಾನಲ್ ನಲ್ಲಿ ಕಾಮೆಂಟ್ ಮಾಡಿದ ವ್ಯಕ್ತಿಯಾದ ಸುರತ್ಕಲ್ ನಿವಾಸಿ ಸಚಿನ್ ( 25 ) ಎಂಬಾತನು ಕಾಮೆಂಟ್ ಮಾಡಿರುವುದನ್ನು ಪತ್ತೆ ಹಚ್ಚಿ ತನಿಖೆ ಕೈಗೊಳ್ಳಲಾಗಿರುತ್ತದೆ.