ಸ್ವಚ್ಛತಾ ಜಾಗೃತಿಗಾಗಿ ಕೈಜೋಡಿಸಿದ ಸಂಗೀತ ತಂಡ

ಸ್ವಚ್ಛತಾ ಜಾಗೃತಿಗಾಗಿ ಕೈಜೋಡಿಸಿದ ಸಂಗೀತ ತಂಡ

ಮಂಗಳೂರು:ಮಂಗಳೂರು ನಗರದಲ್ಲಿ ಸ್ವಚ್ಛತಾ ಜನಜಾಗೃತಿಗಾಗಿ ನಗರದ ಸ್ಪಿನ್ಡ್ರಿಫ್ಟ್ ನಲ್ಲಿ ಆಯೋಜಿಸಲಾದ ಸಂಗೀತ ಕಾರ್ಯಕ್ರಮಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಕಿಕ್ಕಿರಿದು ಸೇರಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸಂಗ್ರಹವಾದ ಉಳಿಕೆ ಹಣವನ್ನು ಆಂಟಿ ಪೆÇಲ್ಯುಷನ್ ಡ್ರೈವ್ ಪ್ರತಿಷ್ಠಾನಕ್ಕೆ ದೇಣಿಗೆ ನೀಡಲಾಗಿದೆ.

go-green

ಮಾಲಿನ್ಯ ನಿಯಂತ್ರಣ ಮತ್ತು ಘನ ತ್ಯಾಜ್ಯ ವಿಲೇವಾರಿ ಕುರಿತು ಜನಜಾಗೃತಿ ಮೂಡಿಸಲು ‘ವಿಕ್’ ಮ್ಯೂಸಿಕ್ ಬ್ಯಾಂಡ್ ಎಪಿಡಿ ಪ್ರತಿಷ್ಠಾನ ಮತ್ತು ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಕಂಪನಿ ಸಹಯೋಗದಲ್ಲಿ ಕಳೆದ ವಾರಾಂತ್ಯ ಸಂಗೀತ ಕಾರ್ಯಕ್ಕಮ ಆಯೋಜಿಸಿತ್ತು. ಕಾರ್ಯಕ್ರಮವು ಕಳೆದ ಭಾನುವಾರ ಮಧಘ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆ ತನಕ ನಡೆಯಿತು.

ಮೂಲದಲ್ಲೇ ಕಸ ವಿಗಂಡನೆ ಮಾಡಬೇಕೇಂದು ನಗರದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಈ ಜಾಝ್ ಮತ್ತು ರಾಕ್ ಮ್ಯೂಸಿಕ್ ಕಲಾವಿದರ ತಂಡ ತನ್ನದೇ ರೀತಿಯಲ್ಲಿ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿದೆ. ಯುವ ವೈದ್ಯರು ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಸಂಗೀತ ಸತಂಡದಲ್ಲಿದ್ದು, ವಾರಾಂತ್ಯದಲ್ಲಿ ಬಿಡುವು ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.

ಮಂಗಳೂರು ಮಹಾನಗರಪಾಲಿಕೆಯಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಜನರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ನಗರದಲ್ಲಿ ಕಸ ವಿಲೇವಾರಿ ಮಾಡುವ ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಕಂಪನಿ ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಸ್ವಚ್ಛತೆ ಮತ್ತು ಮಾಲಿನ್ಯ ನಿಯಂತ್ರಣ ಮಹಾನಗರವೊಂದರ ಆರೋಗ್ಯಕ್ಕೆ ಅಗತ್ಯವಾಗಿದ್ದು, ಜಾಗತಿಕ ತಾಪಮಾನ ಸಮಸ್ಯೆ ಇಂದಿನ ದಿನಗಳಲ್ಲಿ ಜನರು ಜಾಗೃತರಾಗುವುದು ಅತ್ಯಗತ್ಯ ಎನ್ನುತ್ತಾರೆ ಸಂಗೀತ ಕಾರ್ಯಕ್ರಮದ ನೇತೃತ್ವ ವಹಿಸಿದ ಯುವ ಹಾಡುಗಾರ ಡಾ. ಜಾರ್ಜ್ ಜಾಕಬ್. ಎಪಿಡಿ ಪ್ರತಿಷ್ಠಾನ ಈಗಾಗಲೇ ಮಂಗಳೂರು ಮತ್ತು ಬೆಂಗಳೂರು ಮಹಾನಗರಗಳಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಸಂಚಾರಿ ಪೆÇಲೀಸರ ಆರೋಗ್ಯ ಹಿತದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.