ಹಂದಾಡಿ ಹೆಗ್ಗಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಮಂತ್ರಣ ಪತ್ರಿಕೆ ಬಿಡುಗಡೆ

Spread the love

ಹಂದಾಡಿ ಹೆಗ್ಗಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಮಂತ್ರಣ ಪತ್ರಿಕೆ ಬಿಡುಗಡೆ

ಬ್ರಹ್ಮಾವರ ಸಮೀಪದ ಪುರಾತನ ಹಂದಾಡಿ ಹೆಗ್ಗಡೆ ಶ್ರೀ ಸಂತಾನಗೋಪಾಲಕೃಷ್ಣ ದೇವರ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶ ಪುಣ್ಯೋತ್ಸವ ಮೇ1 ಬುಧವಾರದಿಂದ ಮೇ5 ಭಾನುವಾರದ ತನಕ ನಡೆಯಲಿದ್ದು, ಈ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿದ್ದು, ದೇವಳದ ತಂತ್ರಿ ರಮೇಶ್ ಭಟ್ ನಾಯರ್‌ಬೆಟ್ಟು ಮತ್ತು ಅರ್ಚಕ ವೃಂದದವರ ನೇತೃತ್ವದಲ್ಲಿ ಮೇ೨ರಂದು ಗೋಪಾಲಕೃಷ್ಣ ದೇವರ ಪ್ರತಿಷ್ಠೆ ಕಾರ್ಯಕ್ರಮ ಮತ್ತು ಮೇ5 ಭಾನುವಾರದಂದು ಬ್ರಹ್ಮಕಲಶೋತ್ಸವ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅರ್ಚಕ ವೇ.ಮೂ. ಜೀವನ ಉಡುಪ ದೇವರಿಗೆ ಪೂಜೆ ಸಲ್ಲಿಸಿದ ನಂತರ ಆಡಳಿತ ಮಂಡಳಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದದವರು, ಹಂದಾಡಿ ನಾಲ್ಕು ಮನೆಯವರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ತಿತರಿದ್ದರು.


Spread the love