ಹಟ್ಟಿಕುದ್ರು ಅಕ್ರಮ ಮರಳು ಅಡ್ಡೆಗೆ ಕುಂದಾಪುರ ಎಎಸ್ಪಿ ಹರೀರಾಮ್ ಶಂಕರ್ ತಂಡ ದಾಳಿ

ಹಟ್ಟಿಕುದ್ರು ಅಕ್ರಮ ಮರಳು ಅಡ್ಡೆಗೆ ಕುಂದಾಪುರ ಎಎಸ್ಪಿ ಹರೀರಾಮ್ ಶಂಕರ್ ತಂಡ ದಾಳಿ

ಕುಂದಾಫುರ: ಕುಂದಾಪುರ ತಾಲೂಕು ಕಂಡ್ಲೂರು ಠಾಣಾ ವ್ಯಾಪ್ತಿಯ ಹಟ್ಟಿಕುದ್ರು ಅಕ್ರಮ ಮರಳು ಅಡ್ಡೆಗೆ ಕುಂದಾಪುರ ಹೆಚ್ಚುವರಿ ಪೊಲೀಸ್ ಉಪಾಧಿಕ್ಷಕರಾದ ಹರೀರಾಮ್ ಶಂಕರ್ ನೇತೃತ್ವದ ತಂಡ ಸೋಮವಾರ ಸಂಜೆ ದಾಳಿ ನಡೆಸಿದೆ.

ಖಚಿತ ಮಾಹಿತಿಗಳ ಪ್ರಕಾರ ಡಿ.ವೈ.ಎಸ್ .ಪಿ ಹರಿರಾಮ್ ಶಂಕರ್ ತಂಡ ಸೋಮವಾರ ಸಂಜೆ ಕುಂದಾಪುರ ತಾಲೂಕು ಕಂಡ್ಲೂರು ಠಾಣಾ ವ್ಯಾಪ್ತಿಯ ಹಟ್ಟಿಕುದ್ರು ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ್ದು ದಾಳಿಯ ವೇಳೆ 1 ಟಿಪ್ಪರ್, 1 ಹಿಟಾಚಿ ಹಾಗೂ ಅಂದಾಜು 50 ಯುನಿಟ್ ನಷ್ಟು ಮರಳನ್ನು ವಶಪಡಿಸಿಕೊಂಡಿದ್ದು, ದಾಳಿಯ ವೇಳೆ ಮಾಹಿತಿ ಪಡೆದ ಆರೋಪಿಗಳು ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಬಗ್ಗೆ ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.