ಹರಿದ್ವಾರ ವ್ಯಾಸ ಮಂದಿರದ ಪ್ರತಿಷ್ಠಾ ಮಹೋತ್ಸವ

Spread the love

￰ಹರಿದ್ವಾರ ವ್ಯಾಸ ಮಂದಿರದ ಪ್ರತಿಷ್ಠಾ ಮಹೋತ್ಸವ

ಮಂಗಳೂರು: ಕಾಶೀ ಮಠ ಸಂಸ್ಥಾನದ ಹರಿದ್ವಾರ ದಲ್ಲಿರುವ ಶ್ರೀ ವ್ಯಾಸ ಮಂದಿರದ ಪ್ರತಿಷ್ಠಾ ಮಹೋತ್ಸವವು ಶ್ರೀ ಕಾಶಿ ಮಠ ಸಂಸ್ಥಾನದ 21 ನೇ ಮಠಾಧೀಶರಾದ ಪರಮ ಪೂಜ್ಯ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಯವರ ದಿವ್ಯ ಹಸ್ತಗಳಿಂದ ಆದಿತ್ಯವಾರ ವಿಜೃಂಭಣೆಯಿಂದ ಜರಗಿತು .

ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಇಂದು ಬೆಳಗ್ಗೆ ವ್ಯಾಸ ಮಂದಿರದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಯವರ ದಿವ್ಯ ಹಸ್ತಗಳಿಂದ ಪ್ರತಿಷ್ಠಾ ಪಿಸಲ್ಪಟ್ಟ ಭವ್ಯ ಶ್ರೀ ವ್ಯಾಸ ದೇವರ ಶೀಲಾ ವಿಗ್ರಹಕ್ಕೆ ಪಂಚಾಮೃತ , ಕ್ಷೀರಾಭಿಷೇಕ , ಪವಮಾನಾಭಿಷೇಕ ನಡೆದವು ಬಳಿಕ ಶ್ರೀಗಳವರ ಅಮೃತ ಹಸ್ತಗಳಿಂದ ಮಹಾ ಮಂಗಳಾರತಿ ಜರಗಿತು .ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಭಜಕರಿಂದ ಭಜನಾ ಸೇವೆ ನಡೆಯಿತು ರಾತ್ರಿ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳವರ ಪಾದ ಪೂಜೆ ತದನಂತರ ಆಶೀರ್ವಚನ ನೆರವೇರಿತು .


Spread the love