ಹಸಿರು ಅಭಿಯಾನ ರಥಯಾತ್ರೆಗೆ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಚಾಲನೆ 

Spread the love

ಹಸಿರು ಅಭಿಯಾನ ರಥಯಾತ್ರೆಗೆ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಚಾಲನೆ 

ಉಡುಪಿ: ಸಾಸ್ತಾನ ಮಿತ್ರರು, ಗೀತಾನಂದ ಪೌಂಡೆಸನ್,ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್(ರಿ) ಇವರ ಜಂಟಿ ಆಶ್ರಯದಲ್ಲಿ ಮಾರುತಿ ವಿಥಿಕಾದಲ್ಲಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಛೇರಿ ಮುಂಭಾಗ, ಡಿ.29 ರಂದು ಹಮ್ಮಿಕೊಂಡ ಸಮಾರಂಭದಲ್ಲಿ, ಹಸಿರು ಅಭಿಯಾನ ಸೈಕಲ್ ರಥಯಾತ್ರೆಗೆ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಪ್ರಾನ್ಸಿಸ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿಯವರು, ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡ ಬೇಕು. ಪರಿಸರವನ್ನು ಹಸಿರುಗೊಳಿಸುವ ಪ್ರಯತ್ನ ಸಾರ್ವಜನಿಕರಿಂದ ನಡೆಯ ಬೇಕೆಂದು ಕರೆ ನೀಡಿ, ಸಾಸ್ತನ ಮಿತ್ರರ ಪರಿಸರ ಕಾಳಜಿಯನ್ನು ಶ್ಲಾಘನೆ ಮಾಡಿದರು. ಸಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಸಾಮಾಜ ಮುಖಿಯಾಗಿ ಮಾಡುವ ಕೆಲಸ ಕಾರ್ಯಗಳ ಗಮನಿಸುತ್ತ ಬಂದಿದ್ದೆನೆ. ತಕ್ಷಣವಾಗಿ ಅನಾಥರಿಗೆ ನಿರ್ಗತಿಕರಿಗೆ ಪುರ್ನವಸತಿ ಕೇಂದ್ರವನ್ನು ಉಡುಪಿಯಲ್ಲಿ ತೆರೆಯುವುದಾಗಿ ಜಿಲ್ಲಾದಿಕಾರಿ ಅವರು ಭರವಸೆ ನೀಡಿದರು.

ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರು ಹಸಿರು ಅಭಿಯಾನದ ಕರಪತ್ರವನ್ನು ಬಿಡುಗಡೆಗೊಳಿಸಿ, ಉದ್ಧೇಶಿತ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಅರಣ್ಯ ರಕ್ಷಕ ಸಂಘದ ಅಧ್ಯಕ್ಷರಾದ ದೇವರಾಜ್ ಪಾಣ ಅವರು, ರಸ್ತೆ ಬದಿಗಳಲ್ಲಿರುವ ಸಾಲು ಮರಗಳ ಬುಡದಲ್ಲಿ ಕಸದ ರಾಶಿ ಹಾಕಿ ಸುಡುವ ವಿಕೃತ ಕೆಲಸಗಳು ನಡೆಯುತ್ತಿವೆ ಎಂದು ತಮ್ಮ ಅತಿಥಿ ನುಡಿಯಲ್ಲಿ ವಿಷಾದ ವ್ಯಕ್ತಪಡಿಸಿದರು.

ಹಸಿರು ಅಭಿಯಾನದ ಸೈಕಲ್ ರಥಯಾತ್ರೆ ಸಂಕಲ್ಪಿಸಿರುವ ಸಾಸ್ತಾನ ಮಿತ್ರ ಬಳಗದ, ಪರಿಸರವಾದಿ ವಿನಯಚಂದ್ರ ಅವರು ಪ್ರಾಸ್ತವಿಕ ಮಾತುಗಳಲ್ಲಿ ಅಭಿಯಾನದ ಉದ್ಧೇಶದ ಬಗ್ಗೆ ಪ್ರಸ್ತಾಪಿಸಿದರು. ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ಪ್ರೇಮಾನಂದ ಕಲ್ಮಾಡಿ, ರಾಘವೇಂದ್ರ ಪ್ರಭು ಕರ್ವಾಲು, ರವಿಕಿರಣ್, ಸಾಸ್ತಾನ ಮಿತ್ರ ಬಳಗದ ಸದಸ್ಯರು. ಶಿಕ್ಷಕ ಸುಕುಮಾರ್ ಶೆಟ್ಟಿಗಾರ್, ಮತ್ತಿತರರು ಉಪಸ್ಥಿತರಿದ್ದರು.

ಸಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಸ್ವಾಗತಿಸಿದರು. ಲೇಖಕ ತಾರಾನಾಥ್ ಮೇಸ್ತ ಶಿರೂರು ವಂದಿಸಿದರು. ಜ್ಯೋತಿ ಸಮಂತ್ ಅವರು ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರಿಗೆ ಗಿಡ ವಿತರಣೆಯೂ ನಡೆಯಿತು. ಕೃಷ್ಣಾ ಬಾಯಿ ವಾಸುದೇವ ಶೈಣೈ ಮೆಮೋರಿಯಲ್ ಕಾಲೇಜಿನ ಎನ್ ಎಸ್ ಎಸ್ ಶಿಬಿರಾರ್ಥಿಗಳಿಂದ, ರಾಷ್ಟ್ರಗೀತೆ ಗಾಯನದೊಂದಿಗೆ ಸಭಾ ಕಾರ್ಯಕ್ರಮ ಸಮಾಪನಗೊಂಡಿತು. ಬಳಿಕ ಹಸಿರು ಅಭಿಯಾನ ಸೈಕಲ್ ರಥಯಾತ್ರೆಯು ಕವಿ ಮುದ್ದಣ ಮಾರ್ಗದ ಮೂಲಕ ನಗರದಲ್ಲಿ ಜಾಗ್ರತಿ ಮೂಡಿಸುತ್ತ ಸಂಚರಿಸಿತು.


Spread the love