ಸುರಕ್ಷಿತ ಹೆಣ್ಣು ಆರೋಗ್ಯವಂತ ಸಮಾಜದ ಸಂಕೇತ:  ಶಾಲಿನಿ ರಜನೀಶ್ ಗೋಯಲ್

Spread the love

ಸುರಕ್ಷಿತ ಹೆಣ್ಣು ಆರೋಗ್ಯವಂತ ಸಮಾಜದ ಸಂಕೇತ:  ಶಾಲಿನಿ ರಜನೀಶ್ ಗೋಯಲ್

ಮಂಗಳೂರು : ದೇಶದ ಎಲ್ಲಾ ಹಳ್ಳಿ ಮತ್ತು ನಗರಗಳಲ್ಲಿ ಹೆಣ್ಣುಮಕ್ಕಳು ನಿರ್ಭೀತೆಯಿಂದ , ಸುರಕ್ಷಿತ ಮತ್ತು ನೆಮ್ಮದಿಯಾಗಿ ಬದುಕಲು ಸಾಧ್ಯವಾದಗ, ಅಂತಹ ಹೆಣ್ಣುಮಕ್ಕಳು ದೇಶದ ಪ್ರಗತಿಗೆ ದೊಡ್ಡ ಕೊಡಿಗೆಯನ್ನು ನೀಡಬಲ್ಲರು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ –ಗೈಡ್ಸ್ ನಂತಹ ಸಂಸ್ಥೆಗಳು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ನುಡಿದರು.

ಅವರು ಮಂಗಳೂರಿನ ಸಂತ ಅಲೋಶಿಯಸ್ ಶಾಲೆಯಲ್ಲಿ ನೆಡೆಯುತ್ತಿರುವ ರಾಷ್ಟ್ರಮಟ್ಟದ ರೋವರ್ಸ್ ರೇಜರ್ಸ್ ಸಮಾವೇಶದಲ್ಲಿ ಶಿಬಿರಾರ್ಥಿಗಳೊಂದಿಗೆ ಸಂವಾದ ನೆಡೆಸಿದರು.

ಶ್ರೀ ವಿ ಪಿ ಧೀನ್ ದಾಯಾಳ್ ನಾಯ್ಡ ಜನ್ಮಶಾತಾಬ್ಧಿ ಕಾರ್ಯಕ್ರಮದ ಸಂಯೋಜಕರಾದ ಎಂ ಎ ಚಲ್ಲಯ್ಯ ಸ್ವಾಗತಿಸಿದರೆ ಜಿಲ್ಲಾ ಆಯುಕ್ತರಾದ ಶ್ರೀರಾಮ ಶೇಶ ಶೆಟ್ಟಿ ವಂದಿಸಿದರು. ಸಾರ್ವಜನಿಕ ಶಿಕ್ವಣ ಇಲಾಖೆಯ ಉಪನಿರ್ದೇಶರಾದ ಶಿವರಾಮಯ್ಯ , ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶರಾದ ತಿಮ್ಮಯ್ಯ, ಶಿಬಿರಾದ ನಾಯಕರದ ಅನಳೆಂದ್ರ ಶರ್ಮ , ರಾಜ್ಯ ಸಂಘಟನಾ ಆಯುತ್ತರಾದ ಎಂ ಪ್ರಭಾಕರ ಭಟ್ಟ , ಶ್ರೀಮತಿ ರಾಮಲತಾ, ಜಿ ಕೆ ಭಟ್ಟ ಮೊದಲಾದವರು ಉಪಸ್ಥಿತರಿದ್ದರು.


Spread the love