ಹಾಸನ: ನ್ಯಾನೊ ಕಾರು ಪಲ್ಟಿಯಾಗಿ ದಂಪತಿ ಸಾವು, ಮಕ್ಕಳು ಪಾರು

Spread the love

ಹಾಸನ: ಟಾಟಾ ನ್ಯಾನೊ ಕಾರು ಪಲ್ಟಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕಗೊಂಡನಹಳ್ಳಿ ಬಳಿ ನಡೆದಿದೆ. ಅದೃಷ್ಟವಷಾತ್‌ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

accident_pernakilacuple 12-01-2016 18-09-14

ಮೃತರು ಉಡುಪಿ ಮೂಲದ ಅಶೋಕ್‌ ಪ್ರಭು(45) ಹಾಗೂ ಅವರ ಪತ್ನಿ ಅಶ್ವಿ‌ನಿ ಪ್ರಭು(35) ಎಂದು ತಿಳಿದು ಬಂದಿದ್ದು, ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಅಶೋಕ್‌ ಅವರು ಬೆಂಗಳೂರಿನ ಕಾನ್ಯೆಂಟ್ರಿಕ್ಸ್‌ ಕಂಪೆನಿಯಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿದ್ದು,ಉಡುಪಿಯ ಪೆರ್ಣಂಕಿಲದ ನಿವಾಸದಿಂದ ಬೆಂಗಳೂರಿಗೆ ವಾಪಾಸಾಗುತ್ತಿದ್ದರು.
ಈ ಸಂಬಂಧ ಹಿರಿಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love