ಹಿಂಜಾವೆ ಹಳೆಯಂಗಡಿ ಘಟಕಾಧ್ಯಕ್ಷ ನೇಣು ಬಿಗಿದು ಆತ್ಮಹತ್ಯೆ

Spread the love

ಹಿಂಜಾವೆ ಹಳೆಯಂಗಡಿ ಘಟಕಾಧ್ಯಕ್ಷ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಹಿಂದು ಜಾಗರಣಾ ವೇದಿಕೆ ಹಳೆಯಂಗಡಿ ಘಟಕದ ಅಧ್ಯಕ್ಷ ಸೋಮವಾರ ತನ್ನ ಪಕ್ಕದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಹಳೆಯಂಗಡಿ ನಿವಾಸಿ ಸನತ್ (35) ಎಂದು ಗುರುತಿಸಲಾಗಿದೆ.

Haleangadi-sanath-suicide-20160711

ಮಾಹಿತಿಗಳ ಪ್ರಕಾರ  ಸನತ್ ಕುಮಾರ್ ಅವರ ಪಕ್ಕದ ಮನೆಯ ನಿವಾಸಿಯಾದ ಶ್ರೀನಿವಾಸ್ ಭಟ್, ಮನೆಮಂದಿ ಹೊರಗಡೆ ತೆರಳುವಾಗ ಒಂದು ಕೀಯನ್ನು ಸನತ್ ಕುಮಾರ್ ಮನೆಯಲ್ಲಿ ನೀಡಿ ಹೋಗುತ್ತಿದ್ದರು ಎನ್ನಲಾಗಿದೆ. ಸೋಮವಾರ ಮಧ್ಯಾಹ್ನದ ವರೆಗೆ ಫೈನ್ಸಾನ್ಸಿಲ್ಲೇ ಇದ್ದ ಸನತ್ ಕುಮಾರ್ ಮನೆಗೆ ಬಂದಿದ್ದು, ಬಳಿಕ ಪಕ್ಕದ ಮನೆಯ ಕೀ ತೆಗೆದುಕೊಂಡು ಹೋಗಿ ಪಕ್ಕದ ಮನೆಗೆ ತೆರಳಿ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯ ಮುನ್ನ ಸನತ್ ಕುಮಾರ್ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣವಾಗಿದ್ದು, ನನ್ನ ಮನೆಯವರಿಗೆ ಹಾಗೂ ಪಕ್ಕದ ಮನೆಯವರಿಗೆ ತೊಂದರೆ ನೀಡಬೇಡಿ ಎಂದು ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆರ್ಥಿಕ ಮುಗ್ಗಟ್ಟಿನಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.


Spread the love