`ಹಿಂದೂ ರಾಷ್ಟ್ರ’ದ ಸ್ಥಾಪನೆಗಾಗಿ ಜೂನ್ 2 ರಿಂದ ಗೋವಾದಲ್ಲಿ ಏಳನೇ`ಅಖಿಲ ಭಾರತೀಯ ಹಿಂದೂ ಅಧಿವೇಶನ’

Spread the love

`ಹಿಂದೂ ರಾಷ್ಟ್ರ’ದ ಸ್ಥಾಪನೆಗಾಗಿ ಜೂನ್ 2 ರಿಂದ ಗೋವಾದಲ್ಲಿ ಏಳನೇ`ಅಖಿಲ ಭಾರತೀಯ ಹಿಂದೂ ಅಧಿವೇಶನ’

ಮಂಗಳೂರು- `ಹಿಂದೂ ರಾಷ್ಟ್ರ’ ಸ್ಥಾಪನೆಗಾಗಿ ರಾಷ್ಟ್ರಾದ್ಯಂತವಿರುವ ಹಿಂದುತ್ವನಿಷ್ಠ ಸಂಘಟನೆಗಳನ್ನು ಮತ್ತಷ್ಟು ಹೆಚ್ಚು ಸದೃಢಗೊಳಿಸುವ ಉದ್ದೇಶದಿಂದ ಜೂನ್ 2 ರಿಂದ ಜೂನ್ 12 ಈ ಕಾಲಾವಧಿಯಲ್ಲಿ ಗೋವಾದಲ್ಲಿ ಏಳನೇ `ಅಖಿಲ ಭಾರತೀಯ ಹಿಂದೂ ಅಧಿವೇಶನ’ ನಡೆಯಲಿದೆ. ಈ ಅಧಿವೇಶನದಲ್ಲಿ ಭಾರತದ 19 ರಾಜ್ಯಗಳೊಂದಿಗೆ ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದ 150 ಕ್ಕಿಂತ ಅಧಿಕ ಹಿಂದೂ ಸಂಘಟನೆಗಳ 650 ಕ್ಕಿಂತ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

`ಈ ಅಧಿವೇಶನದಲ್ಲಿ ಮುಖ್ಯವಾಗಿ ಹಿಂದೂಗಳ ರಕ್ಷಣೆ, ದೇವಸ್ಥಾನಗಳ ರಕ್ಷಣೆ, ಸಂಸ್ಕøತಿ ರಕ್ಷಣೆ, ಇತಿಹಾಸ ರಕ್ಷಣೆ, ಧರ್ಮ-ಪರಿವರ್ತನೆ, ಲವ್ ಜಿಹಾದ, ಕಾಶ್ಮೀರಿ ಹಿಂದೂಗಳ ಪುನರ್ವಸತಿ ಮುಂತಾದ ಸಮಸ್ಯೆಗಳೊಂದಿಗೆ ಯುವ-ಸಂಘಟನೆಗಳು, ಸಂತ-ಸಂಘಟನೆಗಳು ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆ ವಿಷಯದಲ್ಲಿ ಪ್ರತ್ಯಕ್ಷವಾಗಿ ಕೈಗೊಳ್ಳಬೇಕಾಗಿರುವ ಕಾರ್ಯಗಳನ್ನು ನಿರ್ಧರಿಸಲಾಗುವುದು. ಇದರೊಂದಿಗೆ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಹಾಗೂ ಶ್ರೀಲಂಕಾಗಳಲ್ಲಿರುವ ಹಿಂದೂಗಳ ರಕ್ಷಣೆ ಹಾಗೂ ಅವರಿಗೆ ಸಹಾಯವನ್ನು ಯಾವ ಮಾಧ್ಯಮದಿಂದ ಒದಗಿಸಲು ಪ್ರಯತ್ನಿಸಬಹುದು ಎನ್ನುವ ಕುರಿತು ಚರ್ಚೆಯಾಗಲಿದೆ’, ಎಂದು ಹಿಂದೂ ಜನಜಾಗೃತಿ ಸಮಿತಿಯ ದ.ಕ ಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಇಂದು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಹಸನಾತನ ಸಂಸ್ಥೆಯ ಸೌ. ಲಕ್ಷ್ಮಿ ಪೈ , ಶ್ರೀ ಶ್ರೀ ಜಗದ್ಗುರು ರಮಾನಂದ ಸ್ವಾಮೀಜಿ ಮಹಾಸಂಸ್ಥಾನಮ್ ಚಾರಿಟೇಬಲ್ ಟ್ರಸ್ಟ ನ ಟ್ರಸ್ಟಿ ಶ್ರೀ ಮಧುಸೂಧನ ಅಯಾರ ಇವರು ಉಪಸ್ಥಿತರಿದ್ದರು.

ಕಳೆದ 6 ರಾಷ್ಟ್ರೀಯ ಅಧಿವೇಶನಗಳಲ್ಲಿ ನಿರ್ಧರಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಅನೇಕ ವಿಷಯಗಳ ಮೇಲೆ ಪ್ರತಿಭಟನೆ ಮಾಡಲಾಯಿತು.ಹಿಂದೂ ನೇತಾರರ ಹತ್ಯೆ, ಪ್ರೊ.ಭಗವಾನ್ ಇವರ ಹಿಂದೂ ವಿರೋದಿ ಹೇಳಿಕೆಯ ವಿರುಧ್ಧ, ಲವ್ ಜಿಹಾದ್‍ನ ಬಗ್ಗೆ ಸುಪ್ರೀಮ್ ಕೋರ್ಟ್ ನ ಆದೇಶವನ್ನು ಪಾಲಿಸುವಂತೆ ಮತ್ತು ಇನ್ನಿತರ ವಿಷಯಗಳ ಮೇಲೆ ಆಂದೋಲನ ನಡೆಸಲಾಯಿತು. ಮಂಗಳೂರಿನಲ್ಲಿ ಕಳೆದ ಡಿಸೆಂಬರನಲ್ಲಿ ಸ್ಥಳೀಯ ಸಂಘಟನೆಗಳನ್ನು ಒಗ್ಗೂಡಿಸಲು ಜಿಲ್ಲಾ ಮಟ್ಟದ ಹಿಂದೂ ಅಧಿವೇಶನವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ಕೆ ಮತ್ತಷ್ಟು ವೇಗವನ್ನು ಒದಗಿಸುವ ಪ್ರಯತ್ನವನ್ನು ಈ ಏಳನೇ ಅಧಿವೇಶನದ ಮೂಲಕ ಮಾಡಲಾಗುವುದು.
ಈ ಅಧಿವೇಶನದಲ್ಲಿ ಸ್ಥಳೀಯ ದ.ಕ ಜಿಲ್ಲೆಯಿಂದ ಅನೇಕ ವಕೀಲರು ಮತ್ತು ಹಿಂದೂ ಸಂಘಟನೆಯ ಪ್ರಮುಖರು ಭಾಗವಹಿಸಲಿರುವರು.


Spread the love