ಹಿಂದೂ ರಾಷ್ಟ್ರ ನಿರ್ಮಿಸಲು ಹಿಂದೂಗಳನ್ನು ಯಾರೂ ತಡೆಯಲಾರರು!- ಪ.ಪೂ. ಸಾಧ್ವಿ ಸರಸ್ವತಿಜಿ

Spread the love

ಹಿಂದೂ ರಾಷ್ಟ್ರ ನಿರ್ಮಿಸಲು ಹಿಂದೂಗಳನ್ನು ಯಾರೂ ತಡೆಯಲಾರರು!- ಪ.ಪೂ. ಸಾಧ್ವಿ ಸರಸ್ವತಿಜಿ

ಸಂತರ ಉಪಸಿ್ಥತಿ ಹಾಗೂ ವೇದಮಂತ್ರಗಳ ಘೋಷದಲ್ಲಿ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ಆರಂಭ!

ಫೋಂಡಾ (ಗೋವಾ) – ಭಾರತದ ಮೇಲೆ ಇಂದು ಎಲ್ಲ ದಿಕ್ಕಿನಿಂದ ದಾಳಿಯಾಗುತ್ತಿದೆ. ಕಾಶ್ಮೀರವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಅಮರನಾಥ ಯಾತ್ರೆ ನಿಲ್ಲಿಸುವ ಪ್ರಯತ್ನವಾಗುತ್ತಿದೆ. ಭಾರತ ಮಾತೆ-ಗೋಮಾತೆಗೆ ಇಂದು ದೂಷಿಸಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಹಾಗೂ ಹಿಂದೂ ಅಧಿವೇಶನಗಳನ್ನು ನಿಷೇಧಿಸುವ ಬೇಡಿಕೆಗಳಾಗುತ್ತಿವೆ; ಆದರೆ ವಿರೋಧಕರು ಇದನ್ನು ಗಮನದಲ್ಲಿಡಲಿ, ದೇಶದಲ್ಲಿ ಯಾವುದೇ ಶಕ್ತಿಯು ಹಿಂದೂ ರಾಷ್ಟ್ರವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಒಂದು `ಸನಾತನ’ದ ಮೇಲೆ, `ಹಿಂದೂ ಜನಜಾಗೃತಿ ಸಮಿತಿ’ಯ ಮೇಲೆ ನಿಷೇಧ ಹೇರಿದರೆ ಅದರಿಂದ ಸಾವಿರಾರು ಸನಾತನ ನಿರ್ಮಾಣವಾಗುವುವು. ಭಗವಾ ಭಯೋತ್ಪಾದನೆ ಎಂದು ಇರದೇ ದೇಶ, ಧರ್ಮ ಇವುಗಳಿಗಾಗಿ ಸಮರ್ಪಿಸುವ ಜೀವನ ಅಂದರೆ ಭಗವಾ ಆಗಿದೆ, ಎಂಬ ಜಾಜ್ವಲ್ಯ ಮಾರ್ಗದರ್ಶನವನ್ನು ಮಧ್ಯಪ್ರದೇಶದ ಛಿಂದವಾಡಾದಲ್ಲಿನ ಸನಾತನ ಧರ್ಮ ಪ್ರಚಾರ ಸೇವಾ ಸಮಿತಿಯ ಅಧ್ಯಕ್ಷೆ ಪ.ಪೂ. ಸಾಧ್ವಿ ಸರಸ್ವತಿಜಿಯವರು ಮಾಡಿದರು. ಇವರು ಗೋವಾದ ಫೋಂಡಾದಲ್ಲಿನ ರಾಮನಾಥಿ ದೇವಸಾ್ಥನದ ವಿದ್ಯಾಧಿರಾಜ ಸಭಾಗೃಹದಲ್ಲಿ ನಡೆಯುತ್ತಿರುವ ಆರನೇ `ಅಖಿಲ ಭಾರತೀಯ ಹಿಂದೂ ಅಧಿವೇಶನ’ದಲ್ಲಿ ಮೊದಲ ದಿನ ನಡೆದ ಉದಾ್ಘಟನಾ ಸಮಯದಲ್ಲಿ `ಹಿಂದೂ ರಾಷ್ಟ್ರ ಸಾ್ಥಪನೆಗಾಗಿ ಹಿಂದೂ ಸಮಾಜ ಮತ್ತು ಸಂತಸಮಾಜದ ಸಂಘಟನೆಯ ಆವಶ್ಯಕತೆ’ ಈ ವಿಷಯದಲ್ಲಿ ಮಾತನಾಡುತ್ತಿದ್ದರು. ಶಂಖನಾದವನ್ನು ಮಾಡಿ ಅಧಿವೇಶನವನ್ನು ಆರಂಭಿಸಲಾಯಿತು, ಅನಂತರ ಪ.ಪೂ. ಸಾಧ್ವಿ ಸರಸ್ವತಿಜಿ, ಉತ್ತರಪ್ರದೇಶದ ಹಿಂದೂ ಸ್ವಾಭಿಮಾನ ಮಠದ ರಾಷ್ಟ್ರೀಯ ಅಧ್ಯಕ್ಷೆ ಯತಿ ಮಾಂಚೇತನಾನಂದ ಸರಸ್ವತಿಜಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಪೂ. ಡಾ. ಚಾರುದತ್ತ ಪಿಂಗಳೆ ಮತ್ತು ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಪೂ. ನಂದಕುಮಾರ ಜಾಧವ ಇವರೆಲ್ಲರು ದೀಪಪ್ರಜ್ವಲನೆ ಮಾಡಿದರು. ಈ ಅಧಿವೇಶನಕ್ಕೆ ಭಾರತದ 21 ರಾಜ್ಯಗಳ ಸಹಿತ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಿಂದ 132ಕ್ಕಿಂತ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಗಳ 538 ಕ್ಕಿಂತ ಹೆಚ್ಚು ಪ್ರತಿನಿಧಿಗಳು ಉಪಸಿ್ಥತರಿದ್ದಾರೆ. ಈ ವೇಳೆ `ಲೋಕತಂತ್ರ ಮೆಫೈಲೆ ದುಷ್ಪ್ರವೃತ್ತಿಯೊಂಕೆ ವಿರುದ್ಧಪ್ರತ್ಯಕ್ಷ ಕಾರ್ಯ’ ಈ ಹಿಂದಿ ಹಾಗೂ ಮರಾಠಿ ಭಾಷೆಯ ಗ್ರಂಥಗಳ ಬಿಡುಗಡೆ ಮಾಡಲಾಯಿತು.


ದೀಪಪ್ರಜ್ವಲನೆಯನ್ನು ಮಾಡುತ್ತಿರುವ ಎಡದಿಂದ ಯತೀ ಮಾಂ ಚೇತನಾನಂದ ಸರಸ್ವತಿಜಿ, ಪ.ಪೂ.ಸಾಧ್ವೀ ಸರಸ್ವತಿಜಿ, ಪೂ.ಡಾ.ಚಾರುದತ್ತ ಪಿಂಗಳೆ ಮತ್ತು ಪೂ.ನಂದಕುಮಾರ ಜಾಧವ್

ಹಿಂದೂ ಧರ್ಮದ ಮೇಲಿನ ಆಘಾತಗಳ ವಿರುದ್ಧ ಹಿಂದೂಗಳು ವೀರತ್ವ ಅಂಗೀಕರಿಸಬೇಕು! – ಯತಿ ಮಾ ಚೇತನಾನಂದ ಸರಸ್ವತಿಜಿ

ಕೇವಲ ಹಿಂದೂ ಧರ್ಮವೇ ನಿಜವಾದ ಮಾನವಿಯತೆಯ ಧರ್ಮವಾಗಿದೆ. ಜಗತ್ತಿನಲ್ಲಿ ಹಿಂದೂ ಧರ್ಮ ಉಳಿದರೆ ಮಾತ್ರ ಮಾನವತೆಯ ರಕ್ಷಣೆಯಾಗಬಹುದು. ಇತಿಹಾಸಕಾಲದಿಂದಲೂ ಯಾವಾಗೆಲ್ಲ ಹಿಂದೂ ಧರ್ಮದ ಮೇಲೆ ದಾಳಿಯಾಗಿದೆ, ಆಗ ಆಯಾ ಸಮಯದಲ್ಲಿ ಹಿಂದೂಗಳು ಕ್ಷಾತ್ರವೃತ್ತಿಯಿಂದ ಪ್ರತಿಕಾರ ಮಾಡಿ ಅದನ್ನು ಹಿಮ್ಮೆಟ್ಟಿಸಿದೆ. ಸನಾತನ ಧರ್ಮವು ದಾಳಿಗಳ ಪ್ರತಿಕಾರವನ್ನು ತೆಗೆದುಕೊಳ್ಳಲು ಕಲಿಸುತ್ತದೆ. ಇಂದಿಗೂ ಹಿಂದೂ ಧರ್ಮದ ಮೇಲೆ ಅನೇಕ ಆಘಾತಗಳಾಗುತ್ತಿವೆ. ಈ ಆಘಾತಗಳ ಪ್ರತಿಕಾರ ಮಾಡಿ ಹಿಂದೂ ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂವು ತನ್ನಲ್ಲಿ ವೀರತ್ವ ಅಂಗಿಕರಿಸಲೇ ಬೇಕಾಗಿದೆ, ಎಂದು ಯತಿ ಮಾ ಚೇತನಾನಂದ ಸರಸ್ವತಿಜಿಯವರು ಕರೆ ನೀಡಿದರು.


ಹಿಂದೂ ಅಧಿವೇಶನವನ್ನು ಸಂಬೋಧಿಸುತ್ತಿರುವ ಪ.ಪೂ.ಸಾಧ್ವಿ ಸರಸ್ವತಿಜಿ

ಹಿಂದೂ ರಾಷ್ಟ್ರದ ಸಾ್ಥಪನೆಯೇ ಎಲ್ಲ ಸಮಸ್ಯೆಗಳಿಗೆ ಉತ್ತರ! – ಪೂ. ಡಾ. ಚಾರುದತ್ತ ಪಿಂಗಳೆ

ಒಂದೆಡೆ ಸಂವಿಧಾನವು ಎಲ್ಲರಿಗೆ ಸಮಾನ ಅಧಿಕಾರ ನೀಡುತ್ತದೆ ಎಂದು ನಾವು ಹೇಳುತ್ತೇವೆ; ಆದರೆ ಅದೇ ಸಮಯದಲ್ಲಿ ಶಾಲೆಯಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನಿರಾಕರಿಸಲಾಗುತ್ತದೆ ಮತ್ತು ಹಿಂದೂಗಳೇತರರಿಗೆ ಅದನ್ನು ಪಡೆಯುವ ಅಧಿಕಾರವಿದೆ. ಇಂದು ಕೇವಲ ಹಿಂದೂಗಳ ದೇವಸಾ್ಥನಗಳ ಸರಕಾರಿಕರಣ ಮಾಡಲಾಗುತ್ತದೆ, ಹಿಂದೂಗಳ ದೇವಸಾ್ಥನಗಳ ಹಣವನ್ನು ಸಾಮಾಜಿಕ ಕಾರ್ಯಕ್ಕಾಗಿ ಬಳಸಲಾಗುತ್ತದೆ. ತದ್ವಿರುದ್ಧ ಇತರ ಧರ್ಮಿಯರ ಧಾರ್ಮಿಕ ಸ್ಥಳಗಳನ್ನು ಎಂದೂ ವಶಪಡಿಸಿಕೊಳ್ಳುವುದಿಲ್ಲ. ಸಮಾನ ನಾಗರಿಕ ಕಾನೂನು ಕೇವಲ ಹಿಂದೂಗಳಿಗೆ ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಇಂತಹ ಪ್ರಜಾಪ್ರಭುತ್ವದಲ್ಲಿ ಎಂದಾದರೂ ಹಿಂದೂಗಳಿಗೆ ನ್ಯಾಯ ಸಿಗಬಹುದೇ? ಈಗಿನ ರಾಜ್ಯವ್ಯವಸ್ಥೆ ಹಿಂದೂ ಧರ್ಮೀಯ ಮತ್ತು ಭಾರತಭೂಮಿ ಇವುಗಳ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಆದ್ದರಿಂದ ಹಿಂದೂ ರಾಷ್ಟ್ರವೇ ಎಲ್ಲ ಸಮಸ್ಯೆಗಳಿಗೆ ಉತ್ತರವಾಗಿದೆ. ಹಿಂದೂ ರಾಷ್ಟ್ರದ ಸಾ್ಥಪನೆ ನಮ್ಮ ಕೇವಲ ವಿಚಾರವಲ್ಲ ಅದು ನಮ್ಮ ವ್ರತವಾಗಿದೆ ಮತ್ತು ಸಂವಿಧಾನದತ್ತ ಅಧಿಕಾರವನ್ನು ಬಳಸಿ ಅದನ್ನು ನಾವು ಖಂಡಿತ ಪೂರ್ಣ ಮಾಡುತ್ತೇವೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಪೂ. ಡಾ. ಚಾರುದತ್ತ ಪಿಂಗಳೆಯವರು ಮಾರ್ಗದರ್ಶನ ಮಾಡಿದರು.

ದೇಶದಲ್ಲಿ ಆಂಗ್ಲರು ಹೇರಿದ ವಂಚಕ ಪ್ರಜಾಪ್ರಭುತ್ವವನ್ನು ತೆಗೆಯಲೇ ಬೇಕಿದೆ – ರಮೇಶ ಶಿಂದೆ

ದೇಶವ್ಯಾಪಿ ಹಿಂದೂಸಂಘಟನೆಯ ಕಾರ್ಯವನ್ನು ಮಾಡುವ ಹಿಂದೂ ಜನಜಾಗೃತಿ ಸಮಿತಿ ಇವತ್ತು ಫ್ರಿಂಜ ಆರ್ಗನೈಸೇಶನ್’ ಎಂದು ಹೀಯಾಳಿಸಲಾಗುತ್ತದೆ. `ಭಾರತ ತೆರೆ ತುಕಡೆ ಹೊಂಗೇ’, ಈ ರೀತಿಯ ಘೋಷಣೆ ಕೂಗುವವರ ಮೇಲೆ ಇಂದು ನಿಷೇಧ ಇಲ್ಲ ಆದರೆ ಪ್ರಜಾಪ್ರಭುತ್ವದ ಮಾರ್ಗದಿಂದ ಹಿಂದೂ ರಾಷ್ಟ್ರವನ್ನು ಪುರಸ್ಕರಿಸುವ ಹಿಂದೂ ಅಧಿವೇಶನದ ಮೇಲೆ ನಿರ್ಬಂಧವನ್ನು ಹೇರುವ ಬಗ್ಗೆ ಬೇಡಿಕೆ ಮಾಡುತ್ತಿದ್ದಾರೆ. ಭಾರತದಲ್ಲಿ ಮುಸಲ್ಮಾನ ಆಕ್ರಮಣಕಾರರು ಮತ್ತು ಆಂಗ್ಲರು ಬರುವ ಮೊದಲು ಭಾರತವು ಒಂದು ಸಮರ್ಥ ಹಿಂದೂ ರಾಷ್ಟ್ರವಾಗಿತ್ತು. ನಮ್ಮಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಇದ್ದವು, ಸಾ್ಥ ಪತ್ಯಶಾಸ್ತ್ರ, ನೃತ್ಯಶಾಸ್ತ್ರ ಇತ್ಯಾದಿ ಎಲ್ಲವೂ ಸಮೃದ್ಧ ವಾಗಿತ್ತು. ಹೀಗಿರುವಾಗ ನಮಗೆ ಹಿಂದೂ ರಾಷ್ಟ್ರ ಸಾ್ಥಪನೆಗಾಗಿ ಪ್ರತ್ಯೇಕವಾದ `ಬ್ಲೂ ಪ್ರಿಂಟ್’ ಸಿದ್ಧಪಡಿಸುವ ಆವಶ್ಯಕತೆ ಏನಿದೆ? ನಾವು ದೇಶದಲ್ಲಿ ಆಂಗ್ಲರು ಹೇರಿದ ವಂಚಕ ಪ್ರಜಾಪ್ರಭುತ್ವವನ್ನು ತೊಲಗಿಸಲು `ಬ್ಲೂ ಪ್ರಿಂಟ್’ ತಯಾರಿಸುತ್ತಿದ್ದೇವೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ.ರಮೇಶ ಶಿಂದೆ ಇವರು `ಹಿಂದೂ ರಾಷ್ಟ್ರದ ಸಾ್ಥಪನೆಯ ನಿಲುವು’ ಇದರ ಬಗ್ಗೆ ಮಾರ್ಗದರ್ಶನ ಮಾಡಿದರು.


ಹಿಂದೂ ಅಧಿವೇಶನದಲ್ಲಿ ಉಪಸ್ಥಿತರಿದ್ದ ಗಣ್ಯರು ಮತ್ತು ಹಿಂದುತ್ವನಿಷ್ಠರು

ಹಿಂದೂ ಸಂಘಟನೆ ಮತ್ತು ಸಂತರ ಸಂಘಟನೆ ಇದು ಕಾಲಾನುಸಾರ ಆವಶ್ಯಕವಾಗಿದೆ! – ಪೂ ನಂದಕುಮಾರ ಜಾಧವ, ಧರ್ಮಪ್ರಸಾರಕ, ಸನಾತನ ಸಂಸ್ಥೆ

ಸದ್ಯ ಹಿಂದೂ ಸಮಾಜದ ಮುಂದೆ ಗೋರಕ್ಷಣೆ, ಲವ್ ಜಿಹಾದ್, ಮತಾಂತರ ಈ ರೀತಿಯ ಅನೇಕ ಸಮಸ್ಯೆಗಳಿದ್ದು ಅದಕ್ಕಾಗಿ ಪ್ರತಿಯೊಬ್ಬರು ಅವರವರ ಸ್ತರದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇದು ಸಾಕಾಗುವುದಿಲ್ಲ ಅದಕ್ಕಾಗಿ ವ್ಯಾಪಕ ಸಂಘಟನೆಯ ಆವಶ್ಯಕತೆ ಇದೆ. ಆದ್ದರಿಂದ ವಿಚಾರವಂತರು, ಸಂಪ್ರದಾಯದವರು, ನ್ಯಾಯವಾದಿಗಳು, ಹಿಂದೂ ಸಂಘಟನೆಗಳು ಮತ್ತು ಸಂತರ ಸಂಘಟನೆಗಳು ಕಾಲಾನುಸಾರ ಆವಶ್ಯಕತೆ ಇದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಪೂ. ನಂದಕುಮಾರ ಜಾಧವ್ ಇವರು ಮಾರ್ಗದರ್ಶನ ಮಾಡಿದರು. ಇವರು `ಹಿಂದುತ್ವನಿಷ್ಠ ಸಂಘಟನೆಗಳು ಸಂಘಟಿತರಾಗಿ ಕಾರ್ಯವನ್ನು ಮಾಡುವ ಆವಶ್ಯಕತೆ ಮತ್ತು ಹಿಂದೂಸಂಘಟನೆಯ ದಿಶೆ’ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು.

ಹಿಂದೂಗಳ ಹಿತಕ್ಕಾಗಿ ಧ್ವನಿ ಎತ್ತುವಾಗ ಎಷ್ಟೇ ವಿರೋಧವಾದರೂ ಹಿಂಜರಿಯುವುದಿಲ್ಲ – ಅಭಯ ವರ್ತಕ್

sದ್ಯದ ಸರಕಾರದ ಸಂಕುಚಿತ ದೃಷ್ಟಿಕೋನದಿಂದಾಗಿ ರಾಮಮಂದಿರದ ಸಾ್ಥಪನೆ ಮತ್ತು ಗೋಹತ್ಯೆಯ ಮೇಲೆ ನಿರ್ಬಂಧವನ್ನು ಹೇರಲು ಆಗಲಿಲ್ಲ. ಭ್ರಷ್ಟಾಚಾರ, ಹಿಂದುತ್ವನಿಷ್ಠರ ಹತ್ಯೆ, ಹಿಂದುತ್ವನಿಷ್ಠರಿಗೆ ಕಿರುಕುಳ ಕೊಡುವುದು ನಡೆಯುತ್ತಲೇ ಇದೆ. ಹಿಂದೂಗಳ ಹಿತಕ್ಕಾಗಿ ಧ್ವನಿಯನ್ನು ಎತ್ತುವಾಗ ಎಷ್ಟೇ ವಿರೋಧಗಳು ಬಂದರೂ ಹಿಂಜರಿಯುವುದಿಲ್ಲ. ಸದ್ಯ ಭ್ರಷ್ಟ ಮತ್ತು ಅನೈತಿಕ ಸಮಾಜವ್ಯವಸ್ಥೆಯನ್ನು ತೊಲಗಿಸಲು ಹಿಂದುತ್ವನಿಷ್ಠ ಕಾರ್ಯವನ್ನು ಮಾಡುವವರಿದ್ದಾರೆ. `ಇದು ನನ್ನ ಮಾತೃಭೂಮಿ ಆಗಿದೆ, ಇದು ನನ್ನ ರಾಷ್ಟ್ರವಾಗಿದೆ’, ಈ ಧ್ವನಿಯು ಆಂತರ್ಯದಿಂದ ಬರಲಿ ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ.ಅಭಯ ವರ್ತಕ ಇವರು ಕರೆ ನೀಡಿದರು.

ತಮ್ಮ ಸವಿನಯ
ಶ್ರೀ. ಗುರುಪ್ರಸಾದ ಕರ್ನಾಟಕ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಸಂಪರ್ಕ: 93430 17001


Spread the love