ಹಿಂದೂ ಸಮಾಜ ಪ್ರತ್ಯುತ್ತರ ನೀಡಿದರೆ ಮುಂದಿನ ಸಮಸ್ಯೆಗಳಿಗೆ ಮುಖ್ಯಮಂತ್ರಿ ಹೊಣೆ: ನಳಿನ್

Spread the love

ಹಿಂದೂ ಸಮಾಜ ಪ್ರತ್ಯುತ್ತರ ನೀಡಿದರೆ ಮುಂದಿನ ಸಮಸ್ಯೆಗಳಿಗೆ ಮುಖ್ಯಮಂತ್ರಿ ಹೊಣೆ: ನಳಿನ್

ಮಂಗಳೂರು: ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಹಿಂದೂ ಸಮಾಜ ಎದ್ದು ನಿಂತು ಪ್ರತ್ಯುತ್ತರ ನೀಡಿದರೆ ಮುಂದಿನ ಸಮಸ್ಯೆಗಳಿಗೆ ಪೋಲಿಸ್ ಇಲಾಖೆ ಮತ್ತು ಸರಕಾರ ನೇರ ಹೋಣೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿ ಕಛೇರಿ ಎದುರು ಹಿಂದೂಪರ ಸಂಘಟನೆಗಳು ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಬಹುದೆಂಬ ನಿರೀಕ್ಷೆ ಇತ್ತು ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾವಣ ರಾಜ್ಯವನ್ನು ಸ್ಥಾಪನೆ ಮಾಡಿದೆ. ಹಿಂದೂ ಸಮಾಜದ ಮೇಲೆ ನಿರಂತರವಾದ ಧಾಳಿಗಳು ನಡೆಯುತ್ತಿದ್ದು ಇದನ್ನು ತಡೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಿಂದೂ ಸಮಾಜಕ್ಕೆ ರಕ್ಷಣೆ ನೀಡಲು ರಾಜ್ಯ ಸರಕಾರ ವಿಫಲವಾದರೆ ಕೇಂದ್ರ ಸರಕಾರದ ನೇತೃತ್ವದಲ್ಲಿ ಸೂಕ್ತ ಕ್ರಮ ಕೈಗೊಳ್ಳುಲು ಕೂಡ ಸಿದ್ದನಿದ್ದೇನೆ ಎಂದು ಎಚ್ಚರಿಸಿದರು.

image022hindu-hitarakshana-vedike-siddaramaiah-mangalorean-com-20161121-022 image021hindu-hitarakshana-vedike-siddaramaiah-mangalorean-com-20161121-021 image020hindu-hitarakshana-vedike-siddaramaiah-mangalorean-com-20161121-020 image015hindu-hitarakshana-vedike-siddaramaiah-mangalorean-com-20161121-015 image016hindu-hitarakshana-vedike-siddaramaiah-mangalorean-com-20161121-016 image017hindu-hitarakshana-vedike-siddaramaiah-mangalorean-com-20161121-017 image018hindu-hitarakshana-vedike-siddaramaiah-mangalorean-com-20161121-018 image019hindu-hitarakshana-vedike-siddaramaiah-mangalorean-com-20161121-019 image014hindu-hitarakshana-vedike-siddaramaiah-mangalorean-com-20161121-014 image013hindu-hitarakshana-vedike-siddaramaiah-mangalorean-com-20161121-013 image012hindu-hitarakshana-vedike-siddaramaiah-mangalorean-com-20161121-012 image011hindu-hitarakshana-vedike-siddaramaiah-mangalorean-com-20161121-011 image010hindu-hitarakshana-vedike-siddaramaiah-mangalorean-com-20161121-010 image005hindu-hitarakshana-vedike-siddaramaiah-mangalorean-com-20161121-005 image006hindu-hitarakshana-vedike-siddaramaiah-mangalorean-com-20161121-006 image007hindu-hitarakshana-vedike-siddaramaiah-mangalorean-com-20161121-007 image008hindu-hitarakshana-vedike-siddaramaiah-mangalorean-com-20161121-008 image009hindu-hitarakshana-vedike-siddaramaiah-mangalorean-com-20161121-009 image004hindu-hitarakshana-vedike-siddaramaiah-mangalorean-com-20161121-004 image003hindu-hitarakshana-vedike-siddaramaiah-mangalorean-com-20161121-003 image002hindu-hitarakshana-vedike-siddaramaiah-mangalorean-com-20161121-002 image001hindu-hitarakshana-vedike-siddaramaiah-mangalorean-com-20161121-001

ಡಾ ಜಿ ಪರಮೇಶ್ವರ್ ಗೃಹಮಂತ್ರಿಗಳಾದ ಬಳಿಕ ರಾಜ್ಯದಲ್ಲಿ ಹಿಂದೂ ಸಮಾಜ ಸುರಕ್ಷಿತವಾಗಲಿದೆ ಎಂಬ ನಂಬಿಕೆ ಇತ್ತು. ಕೆ ಜೆ ಜಾರ್ಜ್ ಗೃಹಮಂತ್ರಿಯಾಗಿದ್ದ ವೇಳೆ ಗೋಕಳ್ಳತನ ಮಾಡುವವರು ಹಾಡಹಗಲಿನಲ್ಲಿ ಮಚ್ಚು ತೋರಿಸಿ ಬೆದರಿಸಿ ಗೋವುಗಳನ್ನು ಕದ್ದೊಯ್ಯುತ್ತಿದ್ದರು. ಆದೇ ಪರಮೇಶ್ವರ್ ಗೃಹಸಚಿವರಾದ ಬಳಿಕ ಜನರು ರಸ್ತೆಯಲ್ಲಿ ನಡೆದುಕೊಂಡು ಹೋಗವವಾಗಲೇ ಮಾರಕಾಯುಧಗಳಿಂದ ಹಲ್ಲೆ ನಡೆಸುತ್ತಿದ್ದು, ಮುಖ್ಯಮಂತ್ರಿಗಳು ಇದರ ಹಿಂದೆ ಇದ್ದು ಅವರು ಹಿಂದು ಸಂಘಟನೆಗಳ ಕಾರ್ಯಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ.

ದನಗಳ್ಳ ಕಬೀರ್ ಹತ್ಯೆ ನಡೆದಾಗ ಸಿದ್ದರಾಮಯ್ಯ ಅವರು 10 ಲಕ್ಷ ಪರಿಹಾರ ಘೋಷಿಸಿದರು. ಅದೇ ಹಿಂದು ಯುವಕರಾದ ಪ್ರಶಾಂತ್ ಪೂಜಾರಿ, ರಾಜು, ಕುಟ್ಟಪ್ಪ, ರುದ್ರೇಶ್, ಕಾರ್ತಿರಾಜ್, ಕೊಲೆಗಳಾದಾಗ ಸರಕಾರ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಸಿದ್ದರಾಮಯ್ಯ ಅವರುಗಳ ಮನೆಗೆ ಭೇಟಿ ನೀಡುವ ಕನಿಷ್ಠ ಸೌಜನ್ಯ ಕೂಡ ಪ್ರದರ್ಶಿಸಿಲ್ಲ. ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದು ಒಂದು ವರ್ಷದ ಅವಧಿಯಲ್ಲಿ ಉಳ್ಳಾಲದಲ್ಲಿ 2 ಕೊಲೆ ಮತ್ತು 7ಇರಿತ ಪ್ರಕರಣಗಳೂ ನಡೆದಿವೆ. ಪೋಲಿಸ್ ಇಲಾಖೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರದ ಒತ್ತಡದಲ್ಲಿ ಕೆಲಸಮಾಡುತ್ತಿದೆ. ದಕ್ಷಿಣಕನ್ನಡದಲ್ಲಿ ಐಸಿಸ್ ಚಟುವಟಿಕೆಗಳು ನಡೆಯುತ್ತಿದ್ದು ಪೋಲಿಸರು ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಿಲ್ಲ.

ಈ ವರೆಗೆ ನಾವು ಅಹಿಂಸಾತ್ಮಕವಾಗಿ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ಮಾಡಿದ್ದು, ಸರಕಾರ ಯಾವುದೇ ಕಾರಣಕ್ಕೂ ವೀರ ಸಾವರ್ಕರ್ ಮಾರ್ಗವನ್ನು ನಾವು ಅನುಸರಿಸುವಂತೆ ಅವಕಾಶ ಮಾಡಿಕೊಡಬಾರದು. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಿದ್ದಲ್ಲಿ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು ಮತ್ತು ಗೃಹಸಚಿವರು ನೇರ ಹೋಣೆಯಾಗಲಿದ್ದಾರೆ ಎಂದು ಎಚ್ಚರಿಸಿದರು. ಅಲ್ಲದೆ ಪೋಲಿಸರು ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಕಾರಣರಾದವರ ಕೇಸುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದರು.


Spread the love