ಹಿರಿಯ ಮಹಿಳೆಯ ಸರಗಳ್ಳತನ; ಇಬ್ಬರ ಬಂಧನ

Spread the love

ಹಿರಿಯ ಮಹಿಳೆಯ ಸರಗಳ್ಳತನ; ಇಬ್ಬರ ಬಂಧನ

ಮಂಗಳೂರು: ಹಿರಿಯ ನಾಗರಿಕ ಮಹಿಳೆಯ ಸರಗಳ್ಳತನಕ್ಕೆ ಸಂಬಂಧಿಸಿ ಕದ್ರಿ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸುಳ್ಯ ನಿವಾಸಿ ಮಹಮ್ಮದ್ ನಿಝಾರ್ (25) ಹಾಗೂ ಜುರೈಸ್ ಕೆ ಎಂ (22) ಎಂದು ಗುರುತಿಸಲಾಗಿದೆ.

chain-snaching-kadri-arrest chain-snaching-kadri-arrest-01

ಕದ್ರಿ ನಿವಾಸಿ ನಾಗರತ್ನ ಅವರು ಸಪ್ಟೆಂಬರ್ 28 ರಂದು ಬೆಳಿಗ್ಗೆ 7 ಗಂಟೆಗೆ ತಾನು ಎಂದಿನಂತೆ ತಮ್ಮ ಮನೆಯಿಂದ ವಾಕಿಂಗ್ ಹೊರಟು ಕದ್ರಿ ಕಂಬಳದವರೆಗೆ ಬಂದು ವಾಪಾಸು ಅದೇ ರಸ್ತೆಯಲ್ಲಿ ಮನೆಯ ಕಡೆಗೆ ವಾಕಿಂಗ್ ಮಾಡಿಕೊಂಡು ಸುಮಾರು 7-15 ಗಂಟೆಗೆ ಸದ್ರಿ ರಸ್ತೆಯಲ್ಲಿರುವ ವರಶ್ರೀ ಅಪಾರ್ಟ್‌ಮೆಂಟ್ ಎದುರುಗಡೆ ಬರುತ್ತಿರುವಾಗ ತನ್ನ ಹಿಂದುಗಡೆಯಿಂದ ಬಂದ ಓರ್ವ ಅಪರಿಚಿತ ಯುವಕ ತನ್ನ ಬಳಿಗೆ ಬಂದು ಏಕಾಏಕಿ ತನ್ನ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿ ಧರಿಸಿದ್ದ ಸುಮಾರು 10 ಗ್ರಾಂ ತೂಕದ ಅಂದಾಜು ಮೌಲ್ಯ ರೂ. 20,000/- ಬೆಲೆ ಬಾಳುವ ‘ತುಳಸಿ ಮಣಿ ಕಂಠಿ’ ಚಿನ್ನದ ಸರವನ್ನು ಬಲತ್ಕಾರವಾಗಿ ಕಿತ್ತು ಲೂಟಿ ಮಾಡಿಕೊಂಡು ಓಡಿ ಹೋಗುತ್ತಿದ್ದವನನ್ನು ವರಶ್ರೀ ಅಪಾರ್ಟ್‌ಮೆಂಟ್ ನ ವಾಚ್ ಮೆನ್ ರವರು ಬೆನ್ನಟ್ಟಿದ್ದು, ಅವರ ಕೈಗೂ ಸಿಗದೇ ಅಲ್ಲೇ ಸ್ವಲ್ಪ ಮುಂದಕ್ಕೆ ಹಳದಿ ಬಣ್ಣದ ಹೋಂಡಾ ಡಿಯೋ ಮಾದರಿಯ ಸ್ಕೂಟರಿನಲ್ಲಿ ಹೆಲ್ಮೆಟ್ ಧರಿಸಿ ಕಾದು ಕುಳಿತಿದ್ದ ಇನ್ನೋರ್ವ ಯುವಕನೊಂದಿಗೆ ಸ್ಕೂಟರನ್ನು ಹತ್ತಿ ಪರಾರಿಯಾಗಿದ್ದು, ಸದ್ರಿ ಯುವಕನು ಸುಮಾರು 25-30 ವರ್ಷ ಪ್ರಾಯದವನಂತಿದ್ದು, ಕಪ್ಪು ಬಣ್ಣದ ಅಂಗಿಯನ್ನು ಧರಿಸಿದ್ದು, ಸಪೂರ ಶರೀರವನ್ನು ಹೊಂದಿದ್ದು, ಸುಮಾರು 5 ಅಡಿ ಎತ್ತರವಿರಬಹುದಾಗಿದೆ. ಸದ್ರಿಯಾತನನ್ನು ಅದೇ ರಸ್ತೆಯಾಗಿ ಬರುತ್ತಿದ್ದ ತನ್ನ ಪರಿಚಯದ ಜಯಂತ್ ರವರು ಕೂಡಾ ನೋಡಿದ್ದು, ಮುಂದಕ್ಕೆ ನೋಡಿದರೆ ಗುರುತಿಸಬಲ್ಲೆನು ಎಂಬಿತ್ಯಾದಿಯಾಗಿ ಲಿಖಿತ ದೂರನ್ನು ನೀಡಿದ್ದರು.

ಅವರು ನೀಡಿದ ದೂರಿನಂತೆ ಕಾರ್ಯಚರಣೆ ನಡೆಸಿ ಸಪ್ಟೆಂಬರ್ 6 ರಂದು ಮಂಗಳೂರು ಪೂರ್ವ ಪೊಲಿಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಾರುತಿ. ಜಿ. ನಾಯಕ್ ಹಾಗೂ ಸಿಬ್ಬಂದಿಗಳು ಮಾಹಿತಿಯ ಮೇರೆಗೆ ಕೃತ್ಯಕ್ಕೆ ಬಳಸಿದ ಅದೇ ಮಾದರಿಯ ಹಳದಿ ಬಣ್ಣದ ಹೋಂಡಾ ಡಿಯೋ ಸ್ಕೂಟರಿನಲ್ಲಿ ಇಬ್ಬರು ಹೆಲ್ಮೆಟ್ ಧರಿಸಿದ ವ್ಯಕ್ತಿಗಳನ್ನು ಕೆಪಿಟಿ ಬಳಿ ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಿಸಿದಾಗ ತಾವಿಬ್ಬರೂ ಸೇರಿಕೊಂಡು ಕದ್ರಿ ಕಂಬಳ-ಕದ್ರಿ ಮೈದಾನ ರಸ್ತೆಯಲ್ಲಿ ಜಿ.ಕೆ ಫಾರ್ಮ್ ಎದುರುಗಡೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಹಾಗೂ 28-09-2016ರಂದು ಬೆಳಿಗ್ಗೆ 07-15 ಗಂಟೆ ಸುಮಾರಿಗೆ ಕದ್ರಿ ಕಂಬಳ- ಬಟ್ಟಗುಡ್ಡ ರಸ್ತೆಯಲ್ಲಿ ವರಶ್ರೀ ಎಂಬ ಅಪಾರ್ಟ್‌ಮೆಂಟ್ ಎದುರುಗಡೆ ರಸ್ತೆ ಬದಿಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಬಲತ್ಕಾರವಾಗಿ ಕಿತ್ತು ಸುಲಿಗೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡು, ಸದ್ರಿ ಚಿನ್ನದ ಸರಗಳನ್ನು ಸುಳ್ಯ ತಾಲೂಕಿನ ಬೆಳ್ಳಾರೆಯ ಕಾಮಧೇನು ಗೋಲ್ಡ್ ಪ್ಯಾಲೇಸ್ ಎಂಬ ಜುವೆಲ್ಲರಿ ಅಂಗಡಿಗೆ ಮಾರಿದ್ದಾಗಿ ತಿಳಿಸಿದ ಮೇರೆಗೆ ಅವರನ್ನು ದಸ್ತಗಿರಿ ಮಾಡಿ, ಕೃತ್ಯಕ್ಕೆ ಬಳಸಿದ ಹಳದಿ ಬಣ್ಣದ ಹೋಂಡಾ ಡಿಯೋ ವಾಹನ ಹಾಗೂ ಸುಲಿಗೆ ಮಾಡಿದ ಚಿನ್ನದ ಸರಗಳನ್ನು ಬೆಳ್ಳಾರೆಗೆ ತೆರಳಿ ಕಾಮಧೇನು ಗೋಲ್ಡ್ ಪ್ಯಾಲೇಸ್ ಮಾಲಕಿ ಎಂ. ತಾರಾ ಕುಮಾರಿ ಇವರಿಂದ ಸ್ವಾಧೀನಪಡಿಸಲಾಗಿದೆ.

ಎಂ.ಚಂದ್ರಶೇಖರ್ ಕಖ ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ-ಪೊಲೀಸ್ ಆಯುಕ್ತರುಗಳಾದ ಶ್ರೀ ಕೆ.ಎಂ.ಶಾಂತರಾಜು, ಮತ್ತು ಶ್ರೀ ಡಾ. ಸಂಜೀವ ಎಂ. ಪಾಟೀಲ್ ಹಾಗೂ ಮಂಗಳೂರು ನಗರ ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಉದಯ ನಾಯಕ್ ಇವರ ಮಾರ್ಗದರ್ಶನದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಾರುತಿ.ಜಿ.ನಾಯಕ್, ಪಿ.ಎಸ್.ಐ ರಾಘವ ನಾಯರ್ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ವೆಂಕಟೇಶ್.ಪಿ, ಸುಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಅಜಿತ್ ಮ್ಯಾಥ್ಯೂ, ಮದನ್.ಸಿ.ಎಂ ಮತ್ತುರವಿ. ಹೆಚ್ ಇವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಅತ್ಯಂತ ಕ್ಲಿಷ್ಟಕರವಾದ ಈ ಪ್ರಕರಣಗಳಲ್ಲಿ ವಿಶೇಷ ಚಾಣಾಕ್ಷತನದಿಂದ ಮಾಹಿತಿ ಸಂಗ್ರಹಿಸಿದ ಹೆಚ್.ಸಿ. ವೆಂಕಟೇಶ್, ಪಿಸಿ ಪ್ರಶಾಂತ್ ಶೆಟ್ಟಿ ಹಾಗೂ ಪಿ.ಸಿ. ರವಿ.ಹೆಚ್ ರವರ ಬಗ್ಗೆ ಮಾನ್ಯ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.


Spread the love

2 Comments

  1. A week ago, I had clearly predicted that there would be more arrests in this case. In fact, I had also predicted the profile of people involved in these cases. This is the statistical significance of not ignoring facts, reality and common pattern. (Joker Pinto – Are you listening?) Now, this is the same trend we have witnessed in more than 25-30 incidents at Mangalore Vimaana Nildaana. Still, we see a reluctance from all pseudo-intellectual circles to acknowledge and more importantly question the root of this cultural failure. Is it self-censorship due to fear, lack of intellectual honesty or overwhelming hatred towards sanaathana dharma? Answer – All of the above!!

  2. (Joker Pinto – are you listening?) – Namma Yumreeka’da Joker RampaNNA

    Anddh ya Rampa. Yaan ninna bundle bokka jokes kenonddhulle. Lets see if I got this right. Here goes:

    Some morons smuggle gold through MIA.

    Some RampaNNA does padhrad to Yumreeka for a few Alsandes more.

    The reason – OVERWHELMING hatred towards Sanaaaathaaanaaaa Dharma. Did I get that right, your ‘Lardship’? 😉

Comments are closed.