ಹೆಬ್ರಿಯ ಅಂಗಡಿಯಿಂದ ನಾಲ್ಕು ಬಂದೂಕುಗಳ ಕಳ್ಳತನ ಮಾಡಿದ ದುಷ್ಕರ್ಮಿಗಳು

Spread the love

ಹೆಬ್ರಿಯ ಅಂಗಡಿಯಿಂದ ನಾಲ್ಕು ಬಂದೂಕುಗಳ ಕಳ್ಳತನ ಮಾಡಿದ ದುಷ್ಕರ್ಮಿಗಳು

ಕಾರ್ಕಳ: ಹೆಬ್ರಿಯಲ್ಲಿ ರುವ ಕೋವಿ ಮದ್ದು ಗುಂಡುಗಳ ವ್ಯಾಪಾರಸ್ಥ ರೋಹಿದಾಸ್ ಶೆಣೈ ಅವರ ಅಂಗಡಿಗೆ ಮಂಗಳವಾರ ರಾತ್ರಿ ಕಳ್ಳರು ನುಗ್ಗಿ ನಾಲ್ಕು ಬಂದೂಕುಗಳನ್ನು ಕಳವು ಮಾಡಿರುವ ಗಂಭೀರ ಪ್ರಕರಣ ನಡೆದಿದೆ .

ಹೆಬ್ರಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಯನ್ನು ಎಂದಿನಂತೆ ಸಂಜೆ ಬಾಗಿಲು ಹಾಕಿ ಹೋಗಿದ್ದಾರೆ ಬೆಳಗ್ಗೆ ಬಂದು ನೋಡುವಾಗ ಪ್ರಕರಣ ಬಯಲಾಗಿದ್ದು ,ಅಂಗಡಿ ಮಾಡಿನ ಹಂಚು ತೆಗೆದು ಕಳ್ಳರು ಒಳನುಗ್ಗಿ ಮೂರು ನಾಡ ಕೋವಿ. ಒಂದು ಏರ್ ಗನ್ ದೋಚಿದ್ದಾರೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ .


Spread the love