ಹೆಮ್ಮಾಡಿ : ಜನತಾ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Spread the love

ಹೆಮ್ಮಾಡಿ : ಜನತಾ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕುಂದಾಪುರ: ಇಲ್ಲಿಗೆ ಸಮೀಪದ ಹೆಮ್ಮಾಡಿಯ ಜನತಾ ಪ್ರೌಢಶಾಲೆಯಲ್ಲಿ ಜೆಸಿಐ ಕುಂದಾಪುರ ಸಿಟಿ ಹಾಗೂ ಪ್ರಕ್ರತಿ ಇಕೋ ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಜನತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜು ಕಾಳಾವರ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿದರು. ಜೆಸಿಐ ಕುಂದಾಪುರ ಸಿಟಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ವಿದ್ಯಾರ್ಥಿಗಳಿಗೆ ಹಾಗೂ ಊರಿನವರಿಗೆ ಸಸಿ ವಿತರಿಸಿದರು.

ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ರಾಘವೇಂದ್ರ ಕುಲಾಲ್ ಅಧ್ಯಕ್ಷತೆ ವಹಿಸಿದರು. ಪರಿಸರ ಪ್ರೇಮಿ ಶ್ರೀಧರ್ ಗಾಣಿಗ ಅವರು, ವಿದ್ಯಾರ್ಥಿಗಳಿಗೆ ಮರಗಳ ಉಪಯುಕ್ತತೆಯ ಬಗ್ಗೆ ಮಾಹಿತಿ ನೀಡಿದರು. ಜೆಸಿಐ ಕುಂದಾಪುರ ಸಿಟಿ ಪೂರ್ವ ಅಧ್ಯಕ್ಷ ವಿಜಯ್ ಬಂಡಾರಿ, ಸದಸ್ಯರಾದ ಅಕ್ಷಯ್ ಹೆಮ್ಮಾಡಿ, ಇಕೋ ಕ್ಲಬ್ ಸಂಚಾಲಕ ಮಹಿಂದ್ರಾ ದೇವಾಡಿಗ ಇದ್ದರು.

ಶಿಕ್ಷಕ ವಿಠಲ್ ನಾಯ್ಕ್ ಪರಿಚಿಸಿದರು, ಜೆಸಿಐ ಕುಂದಾಪುರ ಸಿಟಿ ಜೊತೆ ಕಾರ್ಯದರ್ಶಿ ಜಗದೀಶ್ ಮಾಸ್ಟರ್ ನಿರೂಪಿಸಿದರು.


Spread the love