ಹೈ ವೋಲ್ಟೇಜ್ ಚೆಕ್ ಅಮಾನ್ಯ ಪ್ರಕರಣ:  ಆರೋಪಿ ದೋಷಮುಕ್ತ

Spread the love

ಹೈ ವೋಲ್ಟೇಜ್ ಚೆಕ್ ಅಮಾನ್ಯ ಪ್ರಕರಣ:  ಆರೋಪಿ ದೋಷಮುಕ್ತ

ಗೌರಿಬಿದನೂರು/ಕುಂದಾಪುರ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಳಹಳ್ಳಿ ಗ್ರಾಮದ ನಿವಾಸಿ ಲೋಕೇಶ್ರವರನ್ನು ಗೌರಿಬಿದನೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ದೋಷಮುಕ್ತಗೊಳಿಸಿ ಆದೇಶಿಸಿದೆ.

ಆರೋಪಿಯ ಸಹೋದರ ಪ್ರವೀಣ್ರವರು ಗೌರಿಬಿದನೂರು ತಾಲೂಕಿನ ತೊಂಡೆಬಾವಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲವನ್ನು ಪಡೆದಿದ್ದು ಸದ್ರಿ ಸಾಲಕ್ಕೆ ದೂರುದಾರರ ಮಗ ಗೌರಿಬಿದನೂರು ಪೊಲೀಸ್ ಠಾಣೆಯ ಮುಖ್ಯ ಪೇದೆ ರವಿಕುಮಾರ್ರವರು ಜಾಮೀನುದಾರರಾಗಿರುತ್ತಾರೆ. ಕೋವಿಡ್ ಸಮಯದಲ್ಲಿ ಪ್ರವೀಣ್ರವರಿಗೆ ಸಾಲವನ್ನು ಮರುಪಾವತಿಸಲು ಅನಾನುಕೂಲವಾಗಿದ್ದು ಈ ಬಗ್ಗೆ ಆತನ ಸಂಪೂರ್ಣ ಸಾಲವನ್ನು ರವಿಕುಮಾರ್ರವರೇ ಪಾವತಿಸಿದ್ದರು.

ನಂತರ ಪ್ರವೀಣ್ ರವರು ರವಿಕುಮಾರ್ ರವರಿಗೆ ಹಣವನ್ನು ಮರುಪಾವತಿ ಮಾಡಿದ್ದರೂ ಕೂಡ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ರವಿಕುಮಾರ್ರವರು ಗೌರಿಬಿದನೂರು ಠಾಣೆಯ ತನ್ನ ಸಹೋದ್ಯೋಗಿ ಸಿಬ್ಬಂದಿಗಳೊಂದಿಗೆ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ರಾಜೇಶ್ರವರ ಸಹಾಯದಿಂದ ಅಕ್ರಮವಾಗಿ ಪ್ರವೀಣ್ರವರನ್ನು ಸುತ್ತುವರಿದು ಆರೋಪಿಯ ಖಾಲಿ ಚೆಕ್ಗಳನ್ನು ಪಡೆದು ಕೋಟ ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿಟ್ಟಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಪ್ರವೀಣ್ರವರು ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು ಸದ್ರಿ ದೂರು ತನಿಖಾ ಹಂತದಲ್ಲಿರುವಾಗ ಪ್ರವೀಣ್ ರವರಿಂದ ಅಕ್ರಮವಾಗಿ ಪಡೆದ ಆರೋಪಿಯ ಎರಡು ಚೆಕ್ಗಳನ್ನು ರವಿಕುಮಾರ್ ರವರು ತನ್ನ ತಂದೆ ಹಾಗೂ ತಾಯಿಯ ಹೆಸರಿನಲ್ಲಿ ನಗದೀಕರಣಕ್ಕೆ ಹಾಕಿದ್ದು ಆರೋಪಿತನ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಸದ್ರಿ ಚೆಕ್ ಅಮಾನ್ಯಗೊಂಡಿತು. ಈ ಬಗ್ಗೆ ರವಿಕುಮಾರ್ ರವರು ತನ್ನ ತಂದೆಯ ಮೂಲಕ ಮಾನ್ಯ ನ್ಯಾಯಾಲಯದಲ್ಲಿ ಒಂದು ಚೆಕ್ ಅಮಾನ್ಯ ಪ್ರಕರಣವನ್ನು ದಾಖಲಿಸಿದ್ದರು. ವಾದ-ವಿವಾದವನ್ನು ಆಲಿಸಿದ ನ್ಯಾಯಾಲಯವು ಆರೋಪಿತನನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ.

ಆರೋಪಿ ಲೋಕೇಶ್ ಪರವಾಗಿ ಗೌರಿಬಿದನೂರು ನ್ಯಾಯಾಲಯದಲ್ಲಿ ಕುಂದಾಪುರದ ನ್ಯಾಯವಾದಿ ನೀಲ್ ಬ್ರಿಯಾನ್ ಪಿರೇರಾರವರು ವಾದಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments