ಹೊರರಾಜ್ಯದ ನೌಕರರಿಗೆ ತಮ್ಮ ರಾಜ್ಯಗಳಿಗೆ ಕಳುಹಿಸಿಕೊಡಲು ರಾಜ್ಯ ಸರ್ಕಾರ ವಿಫಲ ಆಡಳಿತ ವೈಫಲ್ಯಕ್ಕೆ ಖೇದ- ಐವನ್ ಡಿಸೋಜಾ

Spread the love

ಹೊರರಾಜ್ಯದ ನೌಕರರಿಗೆ ತಮ್ಮ ರಾಜ್ಯಗಳಿಗೆ ಕಳುಹಿಸಿಕೊಡಲು ರಾಜ್ಯ ಸರ್ಕಾರ ವಿಫಲ ಆಡಳಿತ ವೈಫಲ್ಯಕ್ಕೆ ಖೇದ- ಐವನ್ ಡಿಸೋಜಾ

ಮಂಗಳೂರು: ಹೊರ ರಾಜ್ಯದ ನೌಕರರಿಗೆ ತಮ್ಮ ರಾಜ್ಯಗಳಿಗೆ ಕಳುಹಿಸಿಕೊಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಹೊರ ದೇಶಗಳಿಂದಲೂ ನಮ್ಮ ಜಿಲ್ಲೆಗೆ ಕರೆದುಕೊಂಡು ಬರುವಲ್ಲಿಯೂ ಸಂಪೂರ್ಣ ಆಡಳಿತ ವೈಫಲ್ಯ ಕಂಡಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.

ಅವರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದ ನೌಕರರಿಗೆ ರೈಲುಗಳನ್ನು ವ್ಯವಸ್ಥೆ ಮಾಡಿ ಕಳುಹಿಸಿ ಕೊಡಲಾಗುವುದರಿಂದ ಅನೇಕ ಬಾರಿ ಹೇಳಿಕೆ ನೀಡಿದರೂ ಇನ್ನೂ ಅದನ್ನು ಕಾಯ೯ಗತಗೊಳಿಸಲು ಸಾಧ್ಯವಾಗದೆ ಇರುವುದು ಜಿಲ್ಲಾಡಳಿತ ಮತ್ತು ಸರಕಾರ ಸಂಪೂರ್ಣ ವಿಫಲಕಂಡು ಕೂಲಿ ಕಾಮಿ೯ಕರಿಗೆ ಅಧ೯ ದಾರಿಯಲ್ಲಿ ಬಿಟ್ಟಂತ ಆಗಿದೆ. ಊಟ, ತಿಂಡಿ ನೀಡದೇ ವಸತಿ ಸೌಲಭ್ಯ ವಹಿಸದೇ ಇಂದು ಸುಮಾರು 3000 ಸಾವಿರ ಮಂದಿ ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದುಗೊಳ್ಳದೇ ಇದ್ದರೂ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ. ಅವರು ಕೆಲಸ ನಿವ೯ಹಿಸುತ್ತಿರುವ ಮಾಲೀಕರ ವಿರುದ್ಧವು ಯಾವುದೇ ಕ್ರಮಕೈಗೊಳ್ಳದೇ ಇರಲು ಕಾರಣಗಳೇನು? ಅವರನ್ನು ಬೀದಿಗೆ ಬಿಟ್ಟವರು ಯಾರು ಈ ಬಗ್ಗೆ ಜಿಲ್ಲೆಯ ಆಡಳಿತ ಯಾವ ಕ್ರಮಕೈಗೊಳ್ಳುತ್ತೀದೆ ಎಂಬುವುದು ಮುಖ್ಯ

ಹೊರ ರಾಜ್ಯದ ನೊಂದವಣಿ ಪ್ರಾರಂಭ ಮಾಡಲು ಸವ೯ರ್ ಸಮಸ್ಯೆ ಇದ್ದು, ಇಂದಿನಿಂದ ಪ್ರಾರಂಭಗೊಂಡಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಶಾಸಕರು ನೊಂದವಣಿಗೆ ಹೆಚ್ಚು ಕೌಂಟರ್ ಗಳನ್ನು ಹಾಕಬೇಕೆಂದು ಆಡಳಿತವನ್ನು ಒತ್ತಾಯಿಸಿದ್ದಾರೆ.


Spread the love