ಅಂತರ್ರಾಷ್ಟ್ರೀಯ ಕ್ಯಾರಿಕೇಚರ್ ಚಿತ್ರ ಪ್ರದರ್ಶನಕ್ಕೆ ಜಾನ್ ಚಂದ್ರನ್ ರವರ ಕೃತಿ ಆಯ್ಕೆ

Spread the love

ಅಂತರ್ರಾಷ್ಟ್ರೀಯ ಕ್ಯಾರಿಕೇಚರ್ ಚಿತ್ರ ಪ್ರದರ್ಶನಕ್ಕೆ ಜಾನ್ ಚಂದ್ರನ್ ರವರ ಕೃತಿ ಆಯ್ಕೆ

ಗಾಂಧಿ ಸ್ಮಾರಕ ನಿಧಿ ಕರ್ನಾಟಕ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಟೂನ್ ಬೆಂಗಳೂರು, ಈಜಿಪ್ಟ್ ಕಾರ್ಟೂನ್ ಪ್ಲಾಟ್ಫಾರ್ಮ್ ಇವರು ಜಂಟಿಯಾಗಿ “ಗಾಂಧಿ ಸ್ಮಾರಕ ಅಂತರಾಷ್ಟ್ರೀಯ ಕ್ಯಾರಿಕೇಚರ್ ಪ್ರದರ್ಶನ” ವನ್ನು ಆಯೋಜಿಸಿದ್ದು ಅದರಲ್ಲಿ ಕರ್ನಾಟಕದ ಖ್ಯಾತ ವ್ಯಂಗ್ಯಚಿತ್ರಕಾರ ಶ್ರೀ ಜಾನ್ ಚಂದ್ರನ್ ರವರು ರಚಿಸಿದ ಗಾಂಧೀಜಿಯ ಕ್ಯಾರಿಕೇಚರ್ ಚಿತ್ರವು ಪ್ರದರ್ಶನಕ್ಕೆ ಆಯ್ಕೆಗೊಂಡಿದೆ.

ಈ ಅಂತರರಾಷ್ಟ್ರೀಯ ಕ್ಯಾರಿಕೇಚರ್ ಪ್ರದರ್ಶನದಲ್ಲಿ ವಿಶ್ವಖ್ಯಾತ ವ್ಯಂಗ್ಯಚಿತ್ರಕಾರರಾದ ಸರ್ ಡೇವಿಡ್ ಲೊ, ಆರ್. ಕೆ. ಲಕ್ಷ್ಮಣ್ , ಶಂಕರ್, ರಂಗ ಸಹಿತ 31 ದೇಶಗಳ ಕಲಾವಿದರ ನೂರಕ್ಕೂ ಮಿಕ್ಕಿದ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಪ್ರದರ್ಶನವು ಅಕ್ಟೋಬರ್ 4ರಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಟೂನಿಷ್ಟ್ಸ್, ಎಂ ಜಿ ರಸ್ತೆ ಇಲ್ಲಿ ಉದ್ಘಾಟನೆಗೊಳ್ಳಲಿದೆ. ಸಂತ ಅಲೋಷಿಯಸ್ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಜಾನ್ ಚಂದ್ರನ್ ರವರು ವ್ಯಂಗ್ಯಚಿತ್ರ ರಚನೆಗಾಗಿ “ಔಟ್ ಸ್ಟ್ಯಾಂಡಿಂಗ್ ಪರ್ಸನ್ ಪ್ರಶಸ್ತಿ” ಸುವರ್ಣ ಸಾಧಕ ಪ್ರಶಸ್ತಿ ,ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಗಳನ್ನು ಪಡೆದಿದ್ದು ವ್ಯಂಗ್ಯ ಚಿತ್ರ ದಲ್ಲಿ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. “ನಿಮ್ಮಿ” ಕಾರ್ಟೂನ್ ಹಾಗೂ ತರಂಗ ವಾರಪತ್ರಿಕೆಯಲ್ಲಿ ತೆನಾಲಿರಾಮನ ಕಾಮಿಕ್ಸ್ ಸರಣಿ ಗಳನ್ನು ರಚಿಸಿ ಪ್ರಖ್ಯಾತರಾಗಿದ್ದಾರೆ


Spread the love
Subscribe
Notify of

0 Comments
Inline Feedbacks
View all comments