ಅಂತರ್ ಜಿಲ್ಲಾ ಹಾಗೂ ಮೂಡುಶೆಡ್ಡೆ ದನಕಳ್ಳತನ ಪ್ರಕರಣದ ಮತ್ತೋರ್ವನ ಸೆರೆ

Spread the love

ಅಂತರ್ ಜಿಲ್ಲಾ ಹಾಗೂ ಮೂಡುಶೆಡ್ಡೆ ದನಕಳ್ಳತನ ಪ್ರಕರಣದ ಮತ್ತೋರ್ವನ ಸೆರೆ

ಮಂಗಳೂರು:  ನಗರದ ಕಾವೂರು ಪೊಲೀಸ್  ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲ್ ಎಂಬಲ್ಲಿನ ಮನೆಯ ಹಟ್ಟಿಯಿಂದ  ಎರಡು ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಬಾಗಿಯಾಗಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತನನ್ನು ಬಜಪೆ ಕಳವಾರು ನಿವಾಸಿ ಮೊಹಮ್ಮದ್ ಮುನೀರ್ ಯಾನೆ ಮುನ್ನ ಯಾನೆ ಮುನಾವರ್ (36) ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ :- ಜುಲೈಎ 16 ರಂದು ಬೆಳಗ್ಗಿನ ಜಾವ 03-30 ಗಂಟೆ ಸುಮಾರಿಗೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲ್ ಎಂಬಲ್ಲಿನ ನಿವಾಸಿ ಶ್ರೀ.ಪುರುಷೋತ್ತಮ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ ದನಗಳನ್ನು ಬಿಳಿ ಬಣ್ಣದ ಟಾಟಾ ಸುಮೋದಲ್ಲಿ ಬಂದ ದನಕಳ್ಳರು ಮನೆಯವರನ್ನು ಹೆದರಿಸಿ 2 ದನಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿ ತನಿಖೆಯಲ್ಲಿರುತ್ತದೆ. ಈ ಪ್ರಕರಣದಲ್ಲಿ ಬಾಗಿಯಾದ ಆರೋಪಿಗಳ ಪೈಕಿ ಇಮ್ರಾನ್ @ ಕುಟ್ಟ ಇಮ್ರಾನ್,  ಉಮ್ಮರ್ ಪಾರೂಕ್ ಮತ್ತು ನಿಸಾರುದ್ದಿನ್ @ ಪಾರಿವಾಳ ನಿಸಾರ್ ಎಂಬವರನ್ನು ಈಗಾಗಲೇ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಅವರಿಂದ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು.

 ಈ ಪ್ರಕರಣದಲ್ಲಿ  ಬಾಗಿಯಾಗಿ ತಲೆಮರೆಸಿಕೊಂಡಿದ್ದ  ಆರೋಪಿಗಳ  ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು  ಅಗಸ್ಟ್ 5ರಂದು ಮೊಹಮ್ಮದ್ ಮುನೀರ್ ಯಾನೆ ಮುನ್ನ ಯಾನೆ ಮುನಾವರ್ ಎಂಬಾತನನ್ನು ಕಳವಾರು ಚರ್ಚ್ ಬಳಿಯಲ್ಲಿ ವಶಪಡಿಸಿಕೊಂಡಿರುತ್ತಾರೆ. ಈತನು ದಿನಾಂಕ 16/17-07-2018 ರಂದು ಮಂಗಳೂರು ನಗರದ ಮೂಡುಶೆಡ್ಡೆ ಬೈಲು ಎಂಬಲ್ಲಿನ ಹಟ್ಟಿಯೊಂದರಿಂದ 2 ದಿನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಬಾಗಿರುತ್ತಾನೆ. ಈತನ  ವಿರುದ್ಧ  ಈ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ 3, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ 1, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 , ಬೈಂದೂರು ಠಾಣೆಯಲ್ಲಿ 1, ಹಾಸನ ಪೊಲೀಸ್ ಠಾಣೆಯಲ್ಲಿ 1 ಒಟ್ಟು 7  ದನಗಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೇ ಈತನ ವಿರುದ್ಧ ಬಜಪೆ , ಕಾರ್ಕಳ ಗ್ರಾಮಾಂತರ ಹಾಗೂ ಬೈಂದೂರು ಪೊಲೀಸ್ ಠಾಣೆಯಲ್ಲಿ ಮಾನ್ಯ ನ್ಯಾಯಾಲಯದಿಂದ ಹೊರಡಿಸಿದ ದಸ್ತಗಿರಿ ವಾರಂಟು ಕೂಡ  ಇರುತ್ತದೆ.

                ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಶಾಂತರಾಮ, ಪಿಎಸ್ ಐ ಯವರಾದ ಶ್ಯಾಮ್ ಸುಂದರ್.ಹೆಚ್.ಎಂ ಮತ್ತು ಹೆಚ್.ಡಿ.ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು.


Spread the love