ಅಂದರ್- ಬಾಹರ್ ಇಸ್ಪೀಟ್ ಆಟದ ಸ್ಥಳಕ್ಕೆ ಸಿಸಿಬಿ ಪೋಲಿಸ್ ದಾಳಿ ; 12 ಮಂದಿ ಬಂಧನ

Spread the love

ಅಂದರ್- ಬಾಹರ್ ಇಸ್ಪೀಟ್ ಆಟದ ಸ್ಥಳಕ್ಕೆ ಸಿಸಿಬಿ ಪೋಲಿಸ್ ದಾಳಿ ; 12 ಮಂದಿ ಬಂಧನ

ಮಂಗಳೂರು: ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಂದರ್- ಬಾಹರ್ ಇಸ್ಪೀಟ್ ಆಟವಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ ಮಂಗಳೂರು ಸಿಸಿಬಿ ಪೊಲೀಸರು ಒಟ್ಟು 12 ಮಂದಿಯನ್ನು ವಶಕ್ಕೆ ಪಡೆದುಕೊಂಡು, ಅವರಿಂದ ನಗದು ಹಣ ಹಾಗೂ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಬಂಧಿತರನ್ನು ದಿನೇಶ್(42), ನೌಷದ್(29), ವಹಾಬ್(28), ಮೊಯಿದ್ದೀನ್(45), ರವಿ(27), ಸುಲೈಮಾನ್(38), ಯತೀಶ್(27), ಲಾಯ್ಡ್(42), ಯತೀಶ್(24), ದಿಲೀಪ್ ಡಿಸೋಜಾ(47), ಮಿಥುನ್(37), ಸುಜಯ ಶೆಟ್ಟಿ(36) ಎಂದು ಗುರುತಿಸಲಾಗಿದೆ.

ಮಾರ್ಚ್ 13 ರಂದು ರಾತ್ರಿ 11-00 ಗಂಟೆಗೆ ಮಂಗಳೂರು ನಗರದ ಬಂಗ್ರ ಕೂಳೂರಿನ ಬಳಿಯಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಅಂದರ್ – ಬಾಹರ್ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು ರೂ. 16,910/- ನಗದು ಹಾಗೂ ಜೂಜಾಟಕ್ಕೆ ಬಳಸಿದ ಇಸ್ಪೀಟ್ ಎಲೆಗಳು, ಬ್ಯಾಟರಿ, ಲೈಟ್ ಹೀಗೆ ಒಟ್ಟು ರೂ. 23,210/-ಮೊತ್ತದ ಸೊತ್ತನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love