ಅಕ್ಟೋಬರ್ 15ರಂದು ವೆಲ್‍ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಮಂಗಳೂರಿಗೆ
ಮಂಗಳೂರು: ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀ ಅಬ್ದುಲ್ ಹಮೀದ್ ಫರಾನ್‍ರವರು ಅಕ್ಟೋಬರ್ 15ರ ಆದಿತ್ಯವಾರದಂದು ಮಂಗಳೂರಿನಲ್ಲಿ ನಡೆಯುವ ದ.ಕ.ಜಿಲ್ಲಾ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಇವರು ಹಿರಿಯ ರಾಜಕೀಯ ಧುರೀಣರು ಆಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿ ಗಮನಾರ್ಹ ಮತಗಳನ್ನು ಗಳಿಸಿದ್ದರು.
15ರಂದು ಬೆಳಿಗ್ಗೆ 10:30ಕ್ಕೆ ಬಲ್ಮಠದ ಸಹೋದಯ ಹಾಲ್‍ನಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಾರ್ಯಕರ್ತರ ಮತ್ತು ಹಿತೈಷಿಗಳ ಸಭೆಯಲ್ಲಿ ಭಾಗವಹಿಸಲಿರುವರು. ಬಳಿಕ ಜಿಲ್ಲೆಯ ಕೆಲವು ಧಾರ್ಮಿಕ ನೇತಾರರನ್ನು ಮತ್ತು ಸಾಮಾಜಿಕ ಹೋರಾಟಗಾರರನ್ನು ಭೇಟಿ ಮಾಡಲಿದ್ದಾರೆ.
ಸಂಜೆ ಮಂಗಳೂರು ನಗರಪಾಲಿಕೆ ಕ್ಷೇತ್ರವಾದ ಬೆಂಗರೆ ಪ್ರದೇಶಕ್ಕೆ ಭೇಟಿ ನೀಡಿ ದ.ಕ. ಮತ್ತು ಬೆಂಗರೆ ವಾರ್ಡ್ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹಿರ್ ಹುಸೈನ್ ಕೂಡಾ ಅವರೊಂದಿಗೆ ಬರಲಿದ್ದಾರೆ.













