ಅಗಸ್ಟ್ 15 : ಉಡುಪಿ ಜಿಲ್ಲೆಯಲ್ಲಿ 241 ಮಂದಿಗೆ ಕೊರೋನಾ ಪಾಸಿಟಿವ್, 1556 ನೆಗೆಟಿವ್

Spread the love

ಅಗಸ್ಟ್ 15 : ಉಡುಪಿ ಜಿಲ್ಲೆಯಲ್ಲಿ ; 241 ಮಂದಿಗೆ ಕೊರೋನಾ ಪಾಸಿಟಿವ್, 1556 ನೆಗೆಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 241 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7731 ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 1632 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಶನಿವಾರ 1556 ವರದಿಗಳು ನೆಗೆಟಿವ್ ಬಂದಿದ್ದು, 241 ಪಾಸಿಟಿವ್ ಬಂದಿವೆ. 1475 ವರದಿಗಳು ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಶನಿವಾರ 229 ಮಂದಿ ಗುಣಮುಖರಾಗಿದ್ದು ಇದುವರೆಗೂ 5101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2560 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಕೋರೊನಾದಿಂದ ಶನಿವಾರ 2 ಸಾವು ಸಂಭವಿಸಿದ್ದು, ಇದುವರೆಗೆ ಕೊರೋನಾದಿಂದ ಒಟ್ಟು 77ಮಂದಿ ಸಾವನಪ್ಪಿದ್ದಾರೆ


Spread the love