ಅಗಸ್ಟ್ 25: ಉಡುಪಿ ಜಿಲ್ಲೆಯಲ್ಲಿ 217 ಮಂದಿಗೆ ಕೊರೋನಾ ಪಾಸಿಟಿವ್ ದೃಢ

Spread the love

ಅಗಸ್ಟ್ 25: ಉಡುಪಿ ಜಿಲ್ಲೆಯಲ್ಲಿ 217 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 217 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 10453ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 122, ಕುಂದಾಪುರದ 40, ಕಾರ್ಕಳದ 51 ಹಾಗೂ ಇತರೆ ಜಿಲ್ಲೆಗಳ 4 ರೋಗಿಗಳು ಇದ್ದಾರೆ. 81 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 136 ಮಂದಿಗೆ ಲಕ್ಷಣಗಳು ಇಲ್ಲ.

ಪ್ರಾಥಮಿಕ ಸಂಪರ್ಕದಿಂದ 82, ಐಎಲ್ಐ ಲಕ್ಷಣಗಳಿರುವ 69, ‘ಸಾರಿ’ ಲಕ್ಷಣಗಳಿರುವ 6 ಹಾಗೂ ಹೊರ ಜಿಲ್ಲೆ, ಹೊರದೇಶಗಳ ಪ್ರಯಾಣ ಹಿನ್ನೆಲೆ ಹೊಂದಿರುವ 2 ಮಂದಿಗೆ ಸೋಂಕು ತಗುಲಿದ್ದು, 58 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 1388 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಂಗಳವಾರ 1233 ವರದಿಗಳು ನೆಗೆಟಿವ್ ಬಂದಿದ್ದು, 217 ಪಾಸಿಟಿವ್ ಬಂದಿವೆ. 895 ವರದಿಗಳು ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಮಂಗಳವಾರ 180 ಮಂದಿ ಗುಣಮುಖರಾಗಿದ್ದು ಇದುವರೆಗೂ 7737 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2625 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 91ಮಂದಿ ಸಾವನಪ್ಪಿದ್ದಾರೆ


Spread the love