ಅತ್ಯಾಚಾರ ಆರೋಪ: ಕಾವೂರು ಠಾಣೆಯ ಕಾನ್ ಸ್ಟೇಬಲ್ ಸಹಿತ ಇಬ್ಬರ ಬಂಧನ

Spread the love

ಅತ್ಯಾಚಾರ ಆರೋಪ: ಕಾವೂರು ಠಾಣೆಯ ಕಾನ್ ಸ್ಟೇಬಲ್ ಸಹಿತ ಇಬ್ಬರ ಬಂಧನ

ಮಂಗಳೂರು: ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾವೂರು ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಚಂದ್ರ ನಾಯಕ್ ಬಂಧಿತ ಆರೋಪಿ. ಈತನಿಗೆ ಸಹಕರಿಸಿದ ಆರೋಪದಲ್ಲಿ ಸಂತ್ರಸ್ತೆಯ ಪತಿಯನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಅತ್ಯಾಚಾರದ ಬಗ್ಗೆ ಕಾನ್ ಸ್ಟೇಬಲ್ ಚಂದ್ರ ನಾಯಕ್ ವಿರುದ್ಧ ಮಹಿಳೆಯೊಬ್ಬರು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರು ನೀಡಿದ್ದರು. ಅದರಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಆರೋಪಿಗಳಾದ ಕಾನ್ ಸ್ಟೇಬಲ್ ಚಂದ್ರ ನಾಯಕ್ ಮತ್ತು ಸಂತ್ರಸ್ತೆಯ ಪತಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.


Spread the love