ಅನ್‌ಲಾಕ್‌ 2.0 ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ! ಜು 1 ರಿಂದ ಏನಿರುತ್ತೆ? ಏನಿರಲ್ಲ? ರಾತ್ರಿ 8 ರಿಂದ ಬೆಳಗ್ಗೆ 5ರವರಗೆ ರಾತ್ರಿ ಕರ್ಫ್ಯೂ

Spread the love

ಅನ್‌ಲಾಕ್‌ 2.0 ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ! ಜು 1 ರಿಂದ ಏನಿರುತ್ತೆ? ಏನಿರಲ್ಲ? ರಾತ್ರಿ 8 ರಿಂದ ಬೆಳಗ್ಗೆ 5ರವರಗೆ ರಾತ್ರಿ ಕರ್ಫ್ಯೂ

ಹೊಸದಿಲ್ಲಿ: ಕೊರೊನಾ ವೈರಸ್‌ ಹಿನ್ನೆಲೆ ರಾಜ್ಯದಲ್ಲಿ ಘೋಷಿಸಿದ್ದ ಲಾಕ್‌ಡೌನ್‌ನ್ನು ಜುಲೈ 31ರವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜುಲೈ 1 ರಿಂದ ಅನ್‌ಲಾಕ್‌ 2.0 ಜಾರಿಗೆ ಬರಲಿದ್ದು, ತಿಂಗಳಾಂತ್ಯದವರೆಗೂ ಜಾರಿಯಲ್ಲಿರಲಿದೆ. ಕೇಂದ್ರ ಗೃಹ ಸಚಿವಾಲಯ ಸೋಮವಾರ ಹೊರಡಿಸಿದ್ದ ಆದೇಶದನ್ವಯ ರಾಜ್ಯದಲ್ಲೂ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದೆ.

ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಲಾಕ್‌ಡೌನ್‌ ಮುಂದುವರೆಯಲಿದ್ದು, ಕಂಟೈನ್ಮೆಂಟ್‌ ಝೋನ್‌ ಹೊರತುಪಡಿಸಿ ಬಹುತೇಕ ಚಟುವಟಿಕೆಗಳು ನಡೆಯಲಿವೆ. ಒಂದಿಷ್ಟು ಚಟುವಟಿಕೆಗಳ ಮೇಲೆ ಎಲ್ಲ ಕಡೆಯೂ ನಿರ್ಬಂಧ ಮುಂದುವರೆಯಲಿದೆ. ರಾತ್ರಿ 8 ರಿಂದ ಬೆಳಗ್ಗೆ 5ರವರೆಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿದೆ.

ರಾಜ್ಯದಲ್ಲಿ ಪ್ರತ್ಯೇಕ ನಿಯಮ
* ರಾತ್ರಿ 8 ರಿಂದ ಬೆಳಗ್ಗೆ 5ರವರಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿದೆ.
* ಜುಲೈ 5 ರಿಂದ ಆಗಸ್ಟ್‌ 2 ರವರೆಗೆ 4 ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಈ ಮೊದಲು ನಿಗದಿಯಾಗಿದ್ದ ವಿವಾಹಗಳನ್ನು ನಡೆಸಬಹುದಾಗಿದೆ.
* ಜುಲೈ 10 ರಿಂದ ಆಗಸ್ಟ್‌ 2ನೇ ಶನಿವಾರದವರೆಗೂ ಪ್ರತಿ ಶನಿವಾರ ಸರಕಾರಿ ಕಚೇರಿಗಳಿಗೆ ರಜೆಯನ್ನು ಘೋಷಿಸಲಾಗಿದೆ.

ಏನಿರುತ್ತೆ..? ಏನಿರಲ್ಲ..?
* ರಾಜ್ಯದಲ್ಲಿ ಶಾಲಾ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು ಜುಲೈ 31ರವರೆಗೂ ಸ್ಥಗಿತಗೊಳ್ಳಲಿವೆ. ಆನ್‌ಲೈನ್‌ ಮತ್ತು ದೂರ ಶಿಕ್ಷಣಕ್ಕೆ ಅನುಮತಿ ನೀಡಲಾಗಿದೆ.
* ಮೆಟ್ರೋ ರೈಲು ಸಂಚಾರದ ಮೇಲಿನ ನಿರ್ಬಂಧ ಮುಂದುವರೆಯಲಿದೆ.
* ಸಿನಿಮಾ ಹಾಲ್‌, ಜಿಮ್‌, ಸ್ವಿಮ್ಮಿಂಗ್‌ ಪೂಲ್‌, ಮನರಂಜನಾ ಪಾರ್ಕ್‌, ಥಿಯೇಟರ್‌, ಬಾರ್‌, ಆಡಿಟೋರಿಯಂ, ಅಸೆಂಬ್ಲಿ ಹಾಲ್‌ ಮತ್ತು ಹೆಚ್ಚು ಜನ ಸೇರುವ ಸ್ಥಳಗಳು ಬಂದ್‌ ಆಗಿರಲಿವೆ.
* ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಹೆಚ್ಚು ಜನ ಸೇರುವ ಕಾರ್ಯಕ್ರಮಗಳು ಮಾಡುವಂತಿಲ್ಲ.
* ದೇಶಿಯ ವಿಮಾನಯಾನ ಸಂಚಾರ ಹಾಗೂ ರೈಲು ಸಂಚಾರ ಮೊದಲಿನಂತೆ ನಿಯಮಿತವಾಗಿ ರಾಜ್ಯದಲ್ಲಿ ಸಂಚರಿಸಲಿವೆ.


Spread the love