ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರ ಬಂಧನ

Spread the love

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರ ಬಂಧನ

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಅಪ್ರಾಪ್ತ ಬಾಲಕಿಯ ಫೋಟೋ ಹಾಗೂ ಆಕೆಯ ವಿರುದ್ದ ವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಸಂದೇಶವನ್ನು ಕಳುಹಿಸಿದರ ಕುರಿತು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೋಟೆಕಾರು ನಿವಾಸಿ ನಿವೇಶ್ (28) ಮತ್ತು ಕೆಪಿಟಿ ಉದಯನಗರ ನಿವಾಸಿ ದುರ್ಗೇಶ್ (25) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಆಕಾಶಭವನ ಶರಣ್ ಎಂಬಾತನು ಅತ್ಯಾಚಾರ ವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಅಪ್ರಾಪ್ತ ಬಾಲಕಿಯ ಫೋಟೋ ಹಾಗೂ ಆಕೆಯ ವಿರುದ್ದ ವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಸಂದೇಶವನ್ನು ಕಳುಹಿಸಿದ್ದು ಈ ಕುರಿತು ಮಹಿಳಾ ಪೊಲೀಸ್  ಠಾಣೆಯಲ್ಲಿ ದಾಖಲಾಗಿತ್ತು.


Spread the love