ಅಭಿವೃದ್ಧಿ ಯೋಜನೆಗಳಿಲ್ಲ ದ, ಗೊಂದಲಮಯ ಬಜೆಟ್ : ಮಾಜಿ ಸಚಿವ ಯು ಟಿ ಖಾದರ್

Spread the love

ಅಭಿವೃದ್ಧಿ ಯೋಜನೆಗಳಿಲ್ಲ ದ, ಗೊಂದಲಮಯ ಬಜೆಟ್ : ಮಾಜಿ ಸಚಿವ ಯು ಟಿ ಖಾದರ್

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಗುರುವಾರ ಮಂಡಿಸಿದ ಬಜೆಟ್ ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲದ, ಸ್ಪಷ್ಟತೆಯಿಲ್ಲದ ಗೊಂದಲಮಯ ಬಜೆಟ್ ಎಂದು ಮಾಜಿ ಸಚಿವ ಹಾಗೂ ಉಳ್ಳಾಲ ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಜೆಟ್ ನಲ್ಲಿ ಪೆಟ್ರೊಲ್ ಡಿಸೇಲ್ ಬೆಲೆಯನ್ನು ಏರಿಸಿದ್ದು ಈ ಮೂಲಕ ಇದೊಂದು ಬೆಲೆ ಏರಿಕೆಯ ಬಜೆಟ್ ಆಗಿರುತ್ತದೆ. ಹಿಂದಿನ ಸರಕಾರ ಜಾರಿಗೆ ತಂದ ಜನಪಯೋಗಿ ಯೋಜನೆಗಳು ಮುಂದುವರೆಯುತ್ತಾ ಇಲ್ಲ ಎನ್ನುವ ಕುರಿತು, ಸರಕಾರ ನೀಡುತ್ತಿದ್ದ 7 ಕೆಜಿ ಅಕ್ಕಿಯ ಯೋಜನೆ ಮುಂದುವರೆಸುತ್ತಾರೋ ಇಲ್ಲವೊ ಎನ್ನುವ ಕುರಿತು ಬಜೆಟಿನಲ್ಲಿ ಯಾವುದೇ ಸ್ಪಷ್ಟತೆ ನೀಡಿಲ್ಲ. ಬಜೆಟಿನಲ್ಲಿ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಘೊಷಣೆ ಮಾಡಿಲ್ಲ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯನ್ನು ಈ ಬಾರಿಯ ಬಜೆಟಿನಲ್ಲಿ ಕೈ ಬಿಟ್ಟಿದ್ದಾರೆ. ಒಟ್ಟಾರೆಯಾಗಿ ವರ್ಷಪ್ರತಿ ಬಜೆಟ್ ಮಂಡಿಸಬೇಕು ಎಂಬುದಕ್ಕೆ ಒಂದು ಕಾಟಾಚಾರದ ಬಜೆಟ್ ಇದಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.


Spread the love