ಅಹಿಂಸೆ ಪ್ರಬಲರ ಅಸ್ತ್ರ, ಹಿಂಸೆ ದುರ್ಭಲರ ಸಾಧನ – ಸುಮಾ ಎಸ್.

Spread the love

ಅಹಿಂಸೆ ಪ್ರಬಲರ ಅಸ್ತ್ರ, ಹಿಂಸೆ ದುರ್ಭಲರ ಸಾಧನ – ಸುಮಾ ಎಸ್.

ಉದ್ಯಾವರ: ಅಹಿಂಸೆ ಎನ್ನವದು ಪ್ರಬಲರು ಉಪಯೋಗಿಸುವ ಅಸ್ತ್ರ. ಮಹಾತ್ಮ ಗಾಂಧೀಜಿಯವರು ಈ ಅಸ್ತ್ರವನ್ನು ಉಪಯೋಗಿಸಿಯೇ ದೇಶದ ಜನರನ್ನು ಒಗ್ಗೂಡಿಸಿ ಸ್ವಾತಂತ್ರೈವನ್ನು ತಂದು ಕೊಟ್ಟರು. ಆದರೆ ನಾವಿಂದು ಅಹಿಂಸಾ ಮಾರ್ಗವನ್ನೇ ಮರೆಯುತ್ತಿದ್ದೇವೆ. ಹಿಂಸಾ ಪ್ರವೃತ್ತಿಯನ್ನು ಬೆಳೆಸಿ ಕೊಳ್ಳುತ್ತಿದ್ದೇವೆ, ಹಿಂಸೆ ಎನ್ನುದು ದುರ್ಬಲರ ಸಾಧನ ತಮ್ಮ ಗುರಿ ಸಾದನೆಗಾಗಿವನ್ನು ಈ ಸಾಧನ ಬಳಸಿ ಕೊಳ್ಳುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನ ಕೆಡಿಸುತ್ತಾರೆ. ಗಾಂದೀಜಿ ಸತ್ಯ ಸಮಾನತೆಯನ್ನು ಕ್ರಿಯಾತ್ಮಕಗೊಳಿಸಿ ಸತಮಾನ ಸಂದರೂ ನಾವು ಇಂದು ಕೂಡಾ ಸಮಾನತೆಗಾಗಿ ಹೋರಾಟ ಮಾಡುತ್ತಾ ಇದ್ದೇವೆ. ಜಾತಿ,ಧರ್ಮಗಳ ಗೋಡೆ ಕಟ್ಟಿ ಕೊಂಡು ದ್ವೀಪಗಳಾಗುತ್ತಿದ್ದೇವೆ. ದಲಿತರಿಗೆ ಕಾನೂನಾತ್ಮಕವಾಗಿ ಸಮಾನತೆ ದೊರೆತರೂ ಅದು ಜ್ಯಾರಿಯಾಗುವಲ್ಲಿ ತೊಡಕುಗಳಾಗುತ್ತಿವೆ, ಗಾಂದೀಜಿಯವರು ಪರಿಸರ ನೈರ್ಮಲ್ಯದ ಬಗ್ಗೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಹಾಗಂದ ಕೂಡಲೇ ಕೇವಲ ನಮ್ಮ ಸುತ್ತಮುತ್ತ ನೈರ್ಮಲ್ಯವಾದರೆ ಸಾಲದು ನಮ್ಮ ಮನಸ್ಸನ್ನ ಸ್ವಚ್ಛಗೋಳಿಸ ಸಬೇಕು ಎಂಬುದು ಗಾಂಧಿಯವರ ಕಲ್ಪನೆಯಾಗಿತ್ತು.ಅವರ ಜೇವನವೇ ಒಂದು ಸಂದೇಶ. ಅದನ್ನು ನಾವು ಆರ್ಥ ಮಾಡಿ ಕೊಂಡು ಬದುಕಿದರೆ ಆರೋಗ್ಯವಂತ ಸಮಾಜ ನಿರ್ಮಾಣವಾದೀತು ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇದರ ಉಪನ್ಯಾಸಕಿ , ಚಿಂತಕಿ ಶ್ರೀಮತಿ ಸುಮಾ ಎಸ್, ಅವರು ಉದ್ಯಾವರ ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿ ಜರಗಿದ ಗಾಂಧೀ ಜಯಂತಿ ಸಮಾರಂಭದಲ್ಲಿ ವಿಶೇóಷ ಉಪನ್ಯಾಸಕಿಯಾಗಿ ಆಗಮಿಸಿ ನುಡಿದರು.

ಅವರು ಮುಂದುವರಿಯುತ್ತಾ ನಮ್ಮ ಎದುರು ಇಂದು ಎರಡು ಮಾಧರಿಗಳು ಇದ್ದಾವೆ ಒಂದು ಹಿಟ್ಲರ್ ಇನ್ನೊಂದು ಗಾಂಧೀ ಇಬ್ಬರನ್ನು ಕೂಡಾ ಚರಿತ್ರೆ ನೆನಪಿಸಿ ಕೊಳ್ಳುತ್ತವೆ.. ಒಬ್ಬರು ಸರ್ವಾಧಿಕಾರ ಮತ್ತು ತಾನು ಮಾಡಿದ ಹಿಂಸೆಯ ಮೂಲಕ ಚರಿತ್ರೆಯಲ್ಲಿ ಸ್ಥಾನ ಗಿಟ್ಟಿಸಿ ಕೊಂಡರೆ.. ಇನ್ನೊಬ್ಬರು ಸತ್ಯದ ಮೂಲಕ.ಸಮಾನತೆಯ ಮೂಲಕ, ಅಹಿಂಸೆಯ ಮೂಲಕ ಸ್ಥಾನ ಪಡೆದು ಕೊಂಡರು. ನಾವು ಯಾವ ಮಾದರಿಯನ್ನು ಆಯ್ಕೆ ಮಾಡಿ ಕೊಳ್ಳ ಬೇಕು ಎಂದು ನಮ್ಮ ವಿವೇಚನೆಗೆ ಬಿಟ್ಟಿದ್ದು ಎಂದರು.

gandhi-jayanthi-udyavara gandhi-jayanthi-udyavara00

ಅಧ್ಯಕ್ಷತೆವಹಿಸಿದ ಎಸ್.ಡಿ.ಎಮ್.ಸಿ ಉಪಾದ್ಯಕ್ಷರಾದ ಶ್ರೀ ಉದ್ಯಾವರ ನಾಗೇಶ ಕುಮಾರ್ ರವರು ಮಾತನಾಡಿ, ಜಗತ್ತಿನಲ್ಲಿ ಚಾಲ್ತಿಯಲ್ಲಿರು ಮಾರ್ಗಗಳಿಗೆ ಭಿನ್ನವಾಗಿ ತನ್ನದೇ ಮಾರ್ಗದಲ್ಲಿ ನಡೆದು ಯಶಸ್ವಿ ಅದೂದರಿಂದ ಅವರು ಮಹಾತ್ಮ ರಾದರು. ಬ್ರಿಟೀಷರಿಂದ ಸ್ವಾತಂತ್ರ್ಯವನ್ನ ಪಡೆದು ಕೊಳ್ಳಲು ಅವರು ಬಳಸಿದ ಸತ್ಯಾಗ್ರಹದ ಕಲ್ಪನೆಯಾಗಲಿ,ಒಂದು ಹಿಡಿ ಉಪ್ಪನ್ನು ಎತ್ತಿ ಹಿಡಿದ್ದಿದಾಗಲಿ ಇದು ವಿನೂತನ ಪರಿಕಲ್ಪನೆ. ಇದ ನೀನು ಕೊಡದ್ದಿದ್ದರೆ ನಾನು ಬಿಡಲಾರೆ ಎಂದು ನೈತಿಕ ಒತ್ತಡ ಹೆರುವ ಅಮ್ಮನ ಒತ್ತಾಯ. ತಮಗೆ ಅನಿಸಿದ ಮಾರ್ಗವನ್ನು ಗಾಂದೀಜಿ ಬಿಟ್ಟು ಜನರ ಆಭಿಪ್ರಾಯವನ್ನು ಕೇಳಿ ಕೊಂಡು ಕುಳಿತ್ತಿದ್ದರೆ ಇನ್ನೂ ಕೂಡಾ ನಮಗ ಸ್ವಾತಂತ್ರ್ಯ ದೊರಕುತ್ತಿರಲಿಲ್ಲ. ಅದರೆ ಇಂದು ಗಾಂಧಿ ವಿಚಾರ ಧಾರೆಗಳ ಮೇಲೆ ದಾಳಿ ನಡೆಯುತ್ತದೆ.. ಆದರೆ ಯಾವ ಕಾರಣಕ್ಕೂ ಗಾಂಧೀಜಿಯವರ ವಿಚಾರಧಾರೆಗಳು , ಆದರ್ಶಗಳು ಸಾಯೋದಿಲ್ಲ. ಎಂದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ರಿಯಾಝ್ ಪಳ್ಳಿ, ಶಾಲಾಭಿವೃಧ್ಧಿ ಸಮಿತಿಯ ಸದಸ್ಯರಾದ ಪ್ರತಾಪ್ ಕುಮಾರ್ ಉದ್ಯಾವರ, ಲೋರೆನ್ಸ್ ಡೇಸಾ, ಪಿಟಿಎ ಅಧ್ಯಕ್ಷರಾದ ರಮೇಶ್ ಆಚಾರ್ಯ ಉಪಸ್ಥಿಯಿದ್ದರು . ಪ್ರಾರಂಭದಲ್ಲಿ ಪ್ರಾಂಶುಪಾಲರಾದ ಮಹೇಂದ್ರ ಶರ್ಮ ಸ್ವಾಗತಿಸಿದರು ಕೊನೆಯಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಮುಕಾಂಬೆ ವಂದಿಸಿದರು, ಉಪನ್ಯಾಸಕಿ ಶಾಂತಿ ಡಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿUಳುಗೀತೆ ಸರ್ವಧರ್ಮ ಪ್ರಾರ್ಥನೆ ಮತ್ತು ರಘುಪತಿ ರಾಘª ಗೀತೆ ಹಾಡಿದರು


Spread the love