ಆಗಸ್ಟ್ 15 ರಂದು ಇಸ್ಕಾನ್ ಪಿವಿಎಸ್ ಕಲಾಕುಂಜ ಕೋಡಿಯಲ್ ಬೈಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ   

Spread the love

ಆಗಸ್ಟ್ 15 ರಂದು ಇಸ್ಕಾನ್ ಪಿವಿಎಸ್ ಕಲಾಕುಂಜ ಕೋಡಿಯಲ್ ಬೈಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ   

ಮಂಗಳೂರು: ಪ್ರಪ್ರಥಮ ಬಾರಿಗೆ ಇಸ್ಕಾನ್ ಮಂಗಳೂರು ಶ್ರೀ ಕೃಷ್ಣ ಬಲರಾಮ ಮಂದಿರ ಪಿ.ವಿ.ಎಸ್ ಕಲಾಕುಂಜ ಕೊಡಿಯಾಲ್‌ ಬೈಲ್ ಇವರು ಮಂಗಳೂರಿನಲ್ಲಿ ಅದ್ದೂರಿಯಾದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಮಾಡುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಗುಣಕರ ರಾಮದಾಸ್ ರವರು ತಿಳಿಸಿದ್ದಾರೆ.

ಭಗವಾನ್ ಶ್ರೀಕೃಷ್ಣನ ದೈವಸ್ವರೂಪ ಅವತಾರಕ್ಕೆ ಸಮರ್ಪಿತ ಎರಡು ದಿನಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಮ್ಮಿಲಿತವಾದ ಹಬ್ಬ. ಭಕ್ತಿ, ಸಂಸ್ಕೃತಿ ಮತ್ತು ಕ್ರಿಯಾತ್ಮತೆಯ ಮೂಲಕ ಮಂಗಳೂರ ಜನತೆಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಮಗಾ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನಗರದಲ್ಲಿ ಶ್ರೀಕೃಷ್ಣ ಪ್ರಜ್ಞೆಯನ್ನು ಪಸರಿಸುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ವಿನೋದಾವಳಿಗಳು, ಸ್ಪರ್ಧೆಗಳು, ಡಿಜಿಟಲ್ ಪ್ರಚಾರ, ಪವಿತ್ರ ಆಚರಣೆಗಳು ಹಾಗೂ ಇನ್ನಿತರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

15 ಆಗಸ್ಟ್, ಬೆಳಿಗ್ಗೆ 9.00 ರಿಂದ ರಾತ್ರಿ 9.00 ರವರೆಗೆ.ಸ್ಥಳ : ಇಸ್ಕಾನ್ ಮಂಗಳೂರು ಶ್ರೀಕೃಷ್ಣ ಬಲರಾಮ ಮಂದಿರ, ಪಿ.ವಿ.ಎಸ್. ಕಲಾಕುಂಜ, ಕೊಡಿಯಾಲ್‌ ಬೈಲ್.ಈ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಮಹಾಭಿಷೇಕ, ಭಜನೆ, ಆಧ್ಯಾತ್ಮಿಕ ಪ್ರವಚನ ಹಾಗೂ ಸಮುದಾಯದ ಕೊಡುಗೆ ಇವುಗಳು ಸಮರ್ಪಿತಗೊಂಡಿದೆ.

16 ಆಗಸ್ಟ್ / ಬೆಳಿಗ್ಗೆ 9.00 ರಿಂದ 1.00 ಗಂಟೆಯವರೆಗೆ.ಸ್ಥಳ: ಶಾರದಾ ವಿದ್ಯಾಲಯ ಮೈದಾನ. ಕೊಡಿಯಾಲ್ ಬೈಲ್.

ಈ ದಿನದ ಅಮೋಘ ಸಂಜೆಯು ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬದ ಫುಡ್ ಸ್ಟಾಲ್, ಭಕ್ತಿಗೀತೆ ರಸಮಂಜರಿ, ಹಾಗೂ ಆತ್ಮಸ್ಪೂರ್ತಿದಾಯಕವಾದ ಮಧ್ಯರಾತ್ರಿ ಆರತಿ ಒಳಗೊಂಡಿವೆ.

ಅನನ್ಯವಾದ ಮಧ್ಯರಾತ್ರಿ ಆರತಿ:

ಒಂದು ಶಕ್ತಿದಾಯಕವಾದ ಅಧ್ಯಾತ್ಮದ ಅನುಭೂತಿ ನೀಡುವ ಶ್ರೀಕೃಷ್ಣನ ಜನ್ಮವನ್ನು ಪುನರ್‌ಬಿಂಬಿಸುವ ದೈವೀಕವಾದ ಜನ್ಮ ಆರತಿಯು ನಿಖರವಾಗಿ ಮಧ್ಯರಾತ್ರಿ ವೇಳೆ ಜರಗಲಿದ್ದು ಭಕ್ತಾಧಿಗಳು ಇದರಲ್ಲಿ ಭಾಗಿಯಾಗಿರಿ.

ಮಹಾಭಿಷೇಕ

ತಮ್ಮೆಲ್ಲರ ಹೃದಯವನ್ನು ಭಕ್ತಿಯೊಂದಿಗೆ ಸಮ್ಮಿಳಿಸಿ ದೇವರ ಅನುಗ್ರಹ ಮತ್ತು ಆಶೀರ್ವಾದ ಆವಾಹನೆಗೊಳಿಸುವ ಪವಿತ್ರವಾದ ವೈದಿಕ ಮಂತ್ರೋಚ್ಛಾರಣೆ ಮತ್ತು ವಿಧಿವಿಧ ಸುಸಂದರ್ಭವಾಗಲಿಗೆ ಶ್ರೀಕೃಷ್ಣನ ಮಹಾಭಿಷೇಕ ಸಂಪನ್ನಗೊಳ್ಳಲಿದೆ.

ಈ ಜನ್ಮಾಷ್ಟಮಿಯನ್ನು ಕೇವಲ ಆಚರಣೆಯಾಗದೆ ಚಳುವಳಿಯಾಗಿ ಮಾರ್ಪಡಿಸಿ ಇಲ್ಲಿ ಭಕ್ತಿಯು ಸಂಸ್ಕೃತಿ, ಆಚರಣೆ ನಾವೀನ್ಯತೆಯೊಂದಿಗೆ ಸಾಗುತ್ತಾ ಮಂಗಳೂರು ಜನತೆ ಶ್ರೀಕೃಷ್ಣನ ಭಕ್ತಿಯ ಗೌರವದೊಂದಿಗೆ ಒಟ್ಟುಗೂಡುವ ಸುಸಂದರ್ಭವಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವ ಗಣ್ಯರು ಶ್ರೀ ಸನಂದನ ದಾಸ, ಉಪಾಧ್ಯಕ್ಷರು, ಇಸ್ಕಾನ್, ಶ್ರೀ ಸುಂದರ ಗೌರ ದಾಸ, ಸಂಚಾಲಕರು, ಇಸ್ಕಾನ್ ,ಶ್ರೀ ಮನು, ಸಂಚಾಲಕರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments