ಆರೆಸ್ಸೆಸ್ ಬಣ್ಣ ಬಯಲು : ಹರೀಶ್ ಕಿಣಿ

Spread the love

ಆರೆಸ್ಸೆಸ್ ಬಣ್ಣ ಬಯಲು : ಹರೀಶ್ ಕಿಣಿ

ಉಡುಪಿ: ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನ ಪೀಠಿಕೆಯಲ್ಲಿರುವ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿರುವುದು ಆರ್ ಎಸ್ ಎಸ್ ನ ಹಿಡನ್ ಅಜೆಂಡಾವನ್ನು ಬಯಲುಗೊಳಿಸಿದ್ದು ಆವರ ನಿಜ ಬಣ್ಣ ಬಯಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ತಿಳಿಸಿದ್ದಾರೆ

ಆ ಮನೋಸ್ಥಿತಿಯ ಸಂಘಿಗಳು ದೇಶದ ಜನತೆಯ ಒಗ್ಗಟ್ಟನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದು ಸಂವಿಧಾನವನ್ನು ಒಪ್ಪಿಕೊಳ್ಳದವರು ” ಸಂವಿದಾನ್ ದಿವಸ್ ” ಆಚರಿಸುವುದು ಹಾಸ್ಯಸ್ಪದ. ದೇಶದ ಅಭಿವೃದ್ಧಿ, ಜನತೆಯ ಒಳಿತು ಯುವ ಜನನಾಂಗದ ಭವಿಷ್ಯ, ಮಹಿಳೆಯರಿಗೆ ಭದ್ರತೆ ಸ೦ವಿಧಾನವನ್ನು ಒಪ್ಪಿಕೊಂಡು ಅದಕ್ಕೆ ಸರಿಯಾಗಿ ನಡೆಯುವುದರಿಂದ ಮಾತ್ರ ಸಾಧ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love