ಆರೋಪಕ್ಕೆ ದಾಖಲೆ ಒದಗಿಸಿ; ಸಾರ್ವಜನಿಕ ಚರ್ಚೆಗೆ ಸಿದ್ಧ: ಸ್ಪೀಕರ್ ಖಾದರ್ ವಿರುದ್ಧದ ಆರೋಪಕ್ಕೆ ವಿನಯರಾಜ್ ಸವಾಲು

Spread the love

ಆರೋಪಕ್ಕೆ ದಾಖಲೆ ಒದಗಿಸಿ; ಸಾರ್ವಜನಿಕ ಚರ್ಚೆಗೆ ಸಿದ್ಧ: ಸ್ಪೀಕರ್ ಖಾದರ್ ವಿರುದ್ಧದ ಆರೋಪಕ್ಕೆ ವಿನಯರಾಜ್ ಸವಾಲು

ಮಂಗಳೂರು: ಸಾಂವಿಧಾನಿಕ ಹುದ್ದೆಯಲ್ಲಿರುವ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಡಾ. ಭರತ್ ಶೆಟ್ಟಿಯವರು ದಾಖಲೆಯನ್ನು ಒದಗಿಸಲಿ. ಆ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾವು ಸಿದ್ಧ ಎಂದು ಕಾಂಗ್ರೆಸ್ ವಕ್ತಾರ ವಿನಯರಾಜ್ ಸವಾಲು ಹಾಕಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 4ಜಿ ಕಾನೂನಿನ ವಿಚಾರವಾಗಿ ಮಾತನಾಡುವವರು ಕಾನೂನಿವನ ವಿಚಾರ ತಿಳಿದು ಮಾತನಾಡಬೇಕು. ಇ ಪ್ರೊಕ್ಯೂರ್‌ಮೆಂಟ್‌ನಲ್ಲಿ ಅನುಮಾನ ವಿದ್ದರೆ, ಹಣಕಾಸು ಇಲಾಖೆ ಇದೆ. ಅಲ್ಲಿಂದ ದಾಖಲೆ ಪಡೆಯಬೇಕು. ಅದು ಬಿಟ್ಟು ದಾಖಲೆ ರಹಿತವಾಗಿ ಗಾಳಿಯಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದರು.

ವಿಶ್ವೇಶರ ಕಾಗೇರಿ ಸಂದರ್ಭದ 4ಜಿ ಇ ಪ್ರೊಕ್ಯೂರ್‌ಮೆಂಟ್ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಇಲ್ಲದಿದ್ದರೆ ನಾವು ಬಿಡುಗಡೆ ಮಾಡುತ್ತೇವೆ. ಟೆಂಡರ್ ಪ್ರಕ್ರಿಯೆ ಇಲ್ಲದೆ ನಡೆದಿದೆ ಎಂಬ ಆರೋಪಕ್ಕೆ ಸಾಕ್ಷ್ಯ ಒದಗಿಸಲಿ. ಅದು ಬಿಟ್ಟು ವಿಧಾನಸಭೆ ಕಲಾಪಗಳಿಗೆ ವಿರುದ್ಧವಾಗಿ ನಡೆದುಕೊಂಡು ಅಮಾನತು ಆದ ಶಾಸಕ ಎಂಬ ದ.ಕ. ಜಿಲಲೆಗೆ ಕಳಂಕ ತಂದ ಶಾಸಕರು ದಾಖಲೆ ಇಲ್ಲದೆ ಆರೋಪ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಶಾಸಕ ಭರತ್ ಶೆಟ್ಟಿಯವರು ರಾಹುಲ್ ಗಾಂಧಿ ವಿರುದ್ಧ ಮಾಡಿದ ಅವಹೇಳನಕಾರಿ ವಿಷಯಕ್ಕೆ ಸಂಬಂಧಿಸಿ ದಾಖಲಾದ ಪ್ರಕರಣದಲ್ಲಿ ಜವಾಬ್ಧಾರಿಯುತ ಸ್ಥಾನದಲ್ಲಿರುವ ಶಾಸಕರು ನಾಲಗೆ ಮೇಲೆ ಹಿಡಿತವಿರಿಸಬೇಕು ಎಂದು ಉಚ್ಛ ನ್ಯಾಯಾಲಯ ಹೇಳಿದೆ. ಹಾಗಾಗಿ ಅವರ ಘನತೆ ಏನು ಎಂಬುದನ್ನು ಇದರಿಂದ ಸಾಬೀತಾಗಿದೆ ಎಂದು ಹೇಳಿದ ವಿನಯರಾಜ್, ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದ 7200 ಕೋಟಿ ರೂ.ಗಳ ಭ್ರಷ್ಟಾಚಾರ ಹಗರಣದ ಬಗ್ಗೆ ಆ ಅವಧಿಯಲ್ಲಿ ಶಾಸಕರಾಗಿದ್ದವರು ಉತ್ತರಿಸಲಿ ಎಂದರು.

ಈಗಾಗಲೇ ಈ ಪ್ರಕರಣದ ಬಗ್ಗೆ ನ್ಯಾಯಮೂರ್ತಿ ಜಾನ್ ಮೈಕಲ್ ಡಿಸೋಜಾರಿಂದ ತನಿಖೆ ನಡೆದು ವರದಿ ಸಲ್ಲಿಕೆಯಾಗಿದೆ. ಕಾನೂನು ವಿಭಾಗದಿಂದ ್ಗೆ ಮಾಹಿತಿ ಪಡೆದು ಸರಕಾರ ಕ್ರಮ ವಹಿಸಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ವಿನಯರಾಜ್ ಪ್ರತಿಕ್ರಿಯಿಸಿದರು.

ಜಿಲ್ಲೆಯ ಜವಾಬ್ಧಾರಿಯುತ ಶಾಸಕನಾಗಿ ಅಭಿವೃದ್ಧಿಗೆ ಏನು ಕ್ರಮ ಮಾಡಿದ್ದೀರಿ. ತಮ್ಮ ವ್ಯಾಪ್ತಿಗೆ ಬರುವ ತಣ್ಣೀರುಬಾವಿ, ಸುರತ್ಕಲ್ ಬೀಚ್‌ಒಳಗೊಂಡು ಪ್ರವಾಸೋದ್ಯಮಕ್ಕೆ ಎರಡು ಅವಧಿಯಲ್ಲಿ ಏನು ಮಾಡಿದ್ದೀರಿ, ಕೈಗಾರಿಕಾ ವಲಯ ಅಭಿವೃದ್ಧಿ ಯಾವ ಕ್ರಮ ಆಗಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 70 ಕೋಟಿರೂ. ವೆಚ್ಚದಲ್ಲಿ ಮಂಜೂರು ಆಗಿದ್ದ ಮಾರುಕಟ್ಟೆ ಕಾಮಗಾರಿಯನ್ನು ಎರಡು ಅವಧಿಯಲ್ಲಿ ಪೂರ್ಣಗೊಳಿಸಲುಸಾಧ್ಯವಾಗದೆ ಅದರ ವೆಚ್ಚ 120 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕ್ಲಪ್ತ ಸಮಯದಲ್ಲಿ ವೆಚ್ಚ ಏರಿಕೆಯಾಗುತ್ತಿರಲಿಲ್ಲ. ಅದನ್ನೆಲ್ಲಾ ಮರೆಮಾಚಿ ಸ್ಪೀಕರ್ ವಿರುದ್ಧ ಮಾತನಾಡುವುದು ಸಮಂಜಸವಲ್ಲ ಎಂದವರು ಹೇಳಿದರು.

ಗೋಷ್ಟಿಯಲ್ಲಿ ಮುಖಂಡರಾದ ಅಪ್ಪಿ, ರೂಪಾ ಚೇತನ್, ಚಂದ್ರಕಲಾ ಜೋಗಿ, ಅನಿಲ್ ಕುಮಾರ್, ಪ್ರಕಾಶ್ ಸಾಲ್ಯಾನ್, ಚಿತ್ತರಂಜನ್ ಶೆಟ್ಟಿ, ನವಾಝ್ ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments