ಆಳ್ವಾಸ್ ದೀಪಾವಳಿ – ವಿದ್ಯಾರ್ಥಿಗಳಾದವರು ಕಲಿಕೆಯಿಂದಾಗಿ ತಮ್ಮ ಸಂಸ್ಕøತಿ ಸಂಪ್ರದಾಯಗಳನ್ನು ಮರೆಯಬಾರದು

Spread the love

ಆಳ್ವಾಸ್ ದೀಪಾವಳಿ – ವಿದ್ಯಾರ್ಥಿಗಳಾದವರು ಕಲಿಕೆಯಿಂದಾಗಿ ತಮ್ಮ ಸಂಸ್ಕøತಿ ಸಂಪ್ರದಾಯಗಳನ್ನು ಮರೆಯಬಾರದು

ವಿದ್ಯಾಗಿರಿ: ವಿದ್ಯಾರ್ಥಿಗಳಾದವರು ಕಲಿಕೆಯಿಂದಾಗಿ ತಮ್ಮ ಸಂಸ್ಕøತಿ ಸಂಪ್ರದಾಯಗಳನ್ನು ಮರೆಯಬಾರದು, ಅವುಗಳನ್ನು ಉಳಿಸಿ ಬೆಳೆಸಿಕೊಂಡು ಸಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದರು.

ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆದ ‘ಆಳ್ವಾಸ್ ದೀಪಾವಳಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮ ಊರು, ಭಾಷೆ, ದೇಶದ ಕುರಿತಂತೆ ಅಭಿಮಾನ ಬೆಳೆಸಿಕೊಳ್ಳಬೇಕು. ಜಾತಿ, ಧರ್ಮ, ಬೇದ ಭಾವಗಳನ್ನು ತೊರೆದು ಒಂದಾಗಿ ಹಬ್ಬಗಳನ್ನು ಆಚರಿಸುತ್ತಾ ಸಾಮರಸ್ಯದ ಬದುಕನ್ನು ನಡೆಸಬೇಕು ಎಂದರು. ಆಳ್ವಾಸ್ ದೀಪಾವಳಿ ಅಂಗವಾಗಿ `ಸಾಂಸ್ಕøತಿಕ ವೈಭವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಖ್ಯಆಕರ್ಷಣೆ:
ಸಾಂಪ್ರದಾಯಿಕ ಮೆರವಣಿಗೆ ಮೂಲಕ ಕಾರ್ಯಕ್ರಮ ಆರಂಭವಾಯಿತು. ಹೊಸ ಭತ್ತದ ತೆನೆಯನ್ನು ತುಳಸಿ ಕಟ್ಟೆಯ ಮುಂದಿಟ್ಟು ಪೂಜೆ ಮಾಡಲಾಯಿತು. ನಂತರ ಶಾರದಾ ಪೂಜೆ, ಗೋಪೂಜೆಯನ್ನು ನೆರವೇರಿಸಲಾಯಿತು. ತುಳುನಾಡಿನ ಸಂಪ್ರದಾಯದಂತೆ ಬಲೀಂದ್ರನನ್ನು ಸ್ವಾಗತಿಸಲಾಯಿತು.

ಸಾಂಸ್ಕøತಿಕ ವೈಭವ
ಆಳ್ವಾಸ್ ಸಾಂಸ್ಕøತಿಕ ವೈಭವದಲ್ಲಿ ವಿದ್ಯಾರ್ಥಿಗಳು ಕೇರಳದ ಶೃಂಗಾರಿ ಮೇಳ, ಒಡಿಸ್ಸಿ ನೃತ್ಯ, ಬಡಗುತಿಟ್ಟು ಯಕ್ಷಗಾನ, ಆಂಧ್ರದ ಜನಪದ ಬಂಜಾರ ನೃತ್ಯ, ಶಾಸ್ತ್ರೀಯ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ದೇಹದಾಢ್ರ್ಯ ಪ್ರದರ್ಶನ, ದಾಂಡಿಯಾ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಪಂಜಾಬಿನ ಬಾಂಗ್ರ ನೃತ್ಯ, ಮಣಿಪುರಿ ಧೋಲ್ ಚಲಂ, ಡೊಳ್ಳು ಕುಣಿತ, ಕಥಕ್ ನೃತ್ಯ ಹೀಗೆ ಸುಮಾರು 16 ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಾಯಿತು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಡಾ ಉದಯ್ ಮಂಜುನಾಥ್ ಅಡೇಮನೆ ನಿರ್ವಹಿಸಿದರು.

ಮಂಗಳೂರು ನಗರ ಪೊಲೀಸ ಆಯುಕ್ತ ಡಾ ಹರ್ಷ ಪಿ ಎಸ್, ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್‍ನ ಮಾಲಕ ಶ್ರೀಪತಿ ಭಟ್, ಜಯಶ್ರೀ ಅಮರನಾಥ್ ಶೆಟ್ಟಿ, ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ವಿನಯ್ ಆಳ್ವ, ಹನ ಶೆಟ್ಟಿ ಕದ್ರಿ ನವನೀತ್ ಶೆಟ್ಟಿ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸರರು ಉಪಸ್ಥಿತರಿದ್ದರು.


Spread the love